ಮಹಾರಾಷ್ಟ್ರದಲ್ಲಿ ದಲಿತರ ಮೇಲಿನ ದೌರ್ಜನ್ಯ: ಭೀಮ ಸೇನೆಯಿಂದ ಪ್ರತಿಭಟನೆ

ಮುಝಾಫರ್‌ನಗರ್, ಜ. 5: ಮಹಾರಾಷ್ಟ್ರದಲ್ಲಿ ತಮ್ಮ ಸಮುದಾಯದ ಮೇಲೆ ನಡೆದ ದೌರ್ಜನ್ಯ ಪ್ರತಿಭಟಿಸಿ ದಲಿತರ ಗುಂಪು ಭೀಮ ಸೇನೆಯ ಹೋರಾಟಗಾರರು ಇಲ್ಲಿನ ಕಲಕ್ಟರೇಟ್‌ನಲ್ಲಿ ಪ್ರತಿಭಟನೆ ನಡೆಸಿದರು. ನಿನ್ನೆ ಸಂಜೆ ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಕಾರರು ಧರಣಿ ನಡೆಸಿ ಮಹಾರಾಷ್ಟ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ವೈಭವ್ ಬಾವ್ರಾ ಅವರ ನಾಯಕತ್ವದಲ್ಲಿ ಪ್ರತಿಭಟನೆ ನಡೆದ ಬಳಿಕ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿ ದಲಿತರನ್ನು ರಕ್ಷಿಸುವಲ್ಲಿ ವಿಫಲವಾದ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಭೀಮ ಕೋರೆಗಾಂವ್ ಹೋರಾಟದಲ್ಲಿ ಜಯ ಗಳಿಸಿದ 200ನೇ ಸಂಭ್ರಮಾಚರಣೆಯನ್ನು ಪುಣೆಯಲ್ಲಿ ಜನವರಿ 1ರಂದು ಆಚರಿಸಲಾಗಿತ್ತು. ಈ ಸಂದರ್ಭ ಹಿಂಸಾಚಾರ ನಡೆದಿತ್ತು.
Next Story