ಶಿಕ್ಷೆಯ ಪ್ರಮಾಣ ಕಡಿಮ ಮಾಡಿ: ಲಾಲು ಮನವಿ

ರಾಂಚಿ, ಜ. 4: ಅನಾರೋಗ್ಯದ ಹಿನ್ನೆಲೆಯಲ್ಲಿ ಲಾಲು ಪ್ರಸಾದ್‌ಗೆ ಕನಿಷ್ಠ ಶಿಕ್ಷೆ ನೀಡುವಂತೆ ಕೋರಿ ಆರ್‌ಜೆಡಿ ಮುಖ್ಯಸ್ಥರ ಪರ ವಕೀಲ ಶುಕ್ರವಾರ ರಾಂಚಿ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿದ್ದಾರೆ.
ಈ ಹಗರಣದಲ್ಲಿ ನಾನು ನೇರವಾಗಿ ಭಾಗಿಯಾಗಿಲ್ಲ. ನನ್ನ ಪ್ರಾಯ ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ಶಿಕ್ಷೆ ಕಡಿತಗೊಳಿಸಿ ಎಂದು ಲಾಲು ಪ್ರಸಾದ್ ಮನವಿಯಲ್ಲಿ ಪ್ರತಿಪಾದಿಸಿದ್ದಾರೆ.
ಇನ್ನೊಂದೆಡೆ ಪಕ್ಷದ ಬಿಹಾರದ ವರಿಷ್ಠ ರಾಮಚಂದ್ರ ಪೂರ್ವ, ‘‘ಲಾಲು ಪ್ರಸಾದ್‌ಗೆ ದೇವರ ಅನುಗ್ರಹ ಇದೆ. ಅವರಿಗೆ ನ್ಯಾಯ ದೊರಕುತ್ತದೆ ಎಂಬ ನಂಬಿಕೆ ನಮಗಿದೆ. ನಾಳೆ ನಡೆಯಲಿರುವ ಆರ್‌ಜೆಡಿಯ ನಿರ್ಣಾಯಕ ಸಭೆಯಲ್ಲಿ ಲಾಲು ಜಿ ಪಾಲ್ಗೊಳ್ಳುವುದು ಖಚಿತ’’ ಎಂದಿದ್ದಾರೆ.
Next Story





