ಆದಿಉಡುಪಿಯಲ್ಲಿ ಬಾಳೆಎಲೆ ಮೀನಿನ ಊಟ ಸವಿದ ನಟ ನಿವಿನ್ ಪೌಲಿ

ಉಡುಪಿ, ಜ.5: ಮಲೆಯಾಳಂ ಚಿತ್ರರಂಗದ ಪ್ರಸಿದ್ಧ ನಟ ನಿವಿನ್ ಪೌಲಿ ಇಂದು ಆದಿಉಡುಪಿಯಲ್ಲಿರುವ ತಿಮ್ಮಪ್ಪಣ್ಣ ಹೊಟೆಲ್‌ನಲ್ಲಿ ಸಾಮಾನ್ಯರಂತೆ ಬಾಳೆ ಎಲೆಯ ಮೀನಿನ ಊಟ ಸವಿದು, ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸ್ ನೀಡಿದರು.
ಮಲೆಯಾಳಂ ಹಾಗೂ ತಮಿಳಿನಲ್ಲಿ ಸಾಕಷ್ಟು ಹಿಟ್ ಸಿನೆಮಾಗಳನ್ನು ನೀಡಿದ ನಿವಿನ್ ಪೌಲಿ, ತನ್ನ ಹೊಸ ಸಿನೆಮಾವೊಂದರ ಚಿತ್ರೀಕರಣಕ್ಕಾಗಿ ಉಡುಪಿಗೆ ಆಗಮಿಸಿದ್ದರು. ಹಾಗೆ ಮಲ್ಪೆ ಬೀಚ್‌ಗೆ ಭೇಟಿ ನೀಡಿದ್ದ ಅವರು, ಮಧ್ಯಾಹ್ನ ಮಲ್ಪೆಗೆ ತೆರಳುವ ದಾರಿಯಲ್ಲಿ ಸಿಗುವ ಆದಿಉಡುಪಿಯ ತಿಮ್ಮಪ್ಪಣ್ಣ ಮೀನಿನ ಹೊಟೇಲಿಗೆ 15 ಮಂದಿಯ ತಂಡದೊಂದಿಗೆ ತೆರಳಿದರು.
ಹೊಟೇಲಿನಲ್ಲಿ ಸಾಕಷ್ಟು ಜನ ಇದ್ದರೂ ಕೂಡ ನಿವಿನ್ ಪೌಲಿ ಸಾಮಾನ್ಯರಂತೆ ಕುಳಿತು ಬಾಳೆಎಲೆಯಲ್ಲಿ ಮೀನಿನ ಊಟ ಮಾಡಿದರು. ಅಂಜಲ್, ನಂಗ್ ಮೀನಿನ ತವಾ ಫ್ರೈ ಸವಿದ ಅವರು, ಹೊಟೇಲಿನ ರುಚಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜನಸಾಮಾನ್ಯರು ಊಟ ಮಾಡುವ ಹೊಟೇಲಿಗೆ ಬಂದು ಜನರ ಮಧ್ಯೆ ಕೂತು ಊಟ ಮಾಡಿರುವ ನಟ ಪೌಲಿ ಬಗ್ಗೆ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Next Story





