ಶಿವಮೊಗ್ಗ: ಜ.6 ರಂದು ನೂತನ ಕೇಂದ್ರ ಕಾರಾಗೃಹ ಉದ್ಘಾಟನೆ
ಶಿವಮೊಗ್ಗ,ಜ.5: ಕರ್ನಾಟಕ ಕಾರಗೃಹ ಇಲಾಖೆಯು ಜನವರಿ 6 ರ ಸಂಜೆ 4.00 ಗಂಟೆಗೆ ಜಿಲ್ಲೆಯ ಸೋಗಾನೆ ಗ್ರಾಮದಲ್ಲಿ ಶಿವಮೊಗ್ಗ ನೂತನ ಕೇಂದ್ರ ಕಾರಾಗೃಹ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಂಡಿದೆ.
ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಅವರ ಗೌರವಾನ್ವಿತ ಉಪಸ್ಥಿತಿಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಕಾರಾಗೃಹದ ಕಟ್ಟಡದ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಸಭಾ ಸದಸ್ಯೆ ಶಾರದಾ ಪೂರ್ಯನಾಯ್ಕ ವಹಿಸಿಕೊಳ್ಳಲಿದ್ದಾರೆ.
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಗೃಹ ಸಚಿವ ರಾಮಲಿಂಗರೆಡ್ಡಿ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಲೋಕಸಭಾ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಎಸ್. ಕುಮಾರ್, ವಿಧಾನ ಸಭಾ ಸದಸ್ಯ ಕಿಮ್ಮನೆ ರತ್ನಾಕರ್, ವಿಧಾನಸಭಾ ಸದಸ್ಯ ಕೆ.ಬಿ.ಪ್ರಸನ್ನಕುಮಾರ್, ಸೊರಬ ವಿಧಾನಸಭಾ ಸದಸ್ಯ ಮಧು ಬಂಗಾರಪ್ಪ, ಭದ್ರಾವತಿ ವಿಧಾನಸಭಾ ಸದಸ್ಯ ಎಂ.ಜೆ ಅಪ್ಪಾಜಿಗೌಡ, ಶಿಕಾರಿಪುರ ವಿಧಾನಸಭಾ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರುಗಳಾದ ಆರ್. ಪ್ರಸನ್ನಕುಮಾರ್, ಎಂ.ಬಿ.ಭಾನುಪ್ರಕಾಶ್, ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ, ಭದ್ರಾ ಅಣೆಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಹಾನಗರ ಪಾಲಿಕೆ ಮಹಾಪೌರ ಎನ್.ಎಳುಮಲೈ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಸ್ಮಾಯಿಲ್ ಖಾನ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಜಿಲ್ಲಾಧಿಕಾರಿ ಎಂ. ಲೋಕೇಶ್, ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ, ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ಗರ್ಗ್, ಪೋಲಿಸ್ ಮಹಾನಿದೇರ್ಶಕರು ಎನ್.ಎಸ್.ಮೇಘರಿಕ್, ಪೋಲಿಸ್ ಉಪ ಮಹಾನಿರೀಕ್ಷಕರು ಹೆಚ್.ಎಸ್. ರೇವಣ್ಣ, ಹೆಚ್ಚುವರಿ ಕಾರಗೃಹಗಳ ಮಹಾನಿರೀಕ್ಷಕ ಜಿ. ವೀರಭದ್ರಸ್ವಾಮಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಯ ಅಧೀಕ್ಷಕ ಅಭಿಯಂತರರು ಶಿವಾನಂದ್ ಎಸ್. ಬಣಕಾರ್ ಹಾಗೂ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಚಂದ್ರಹಾಸ್ ಇವರುಗಳು ಉಪಸ್ಥಿತರಿರುವರು.







