ಅಡಿಕೆ ಮರದಿಂದ ಬಿದ್ದು ಮೃತ್ಯು
ಕಾರ್ಕಳ, ಜ.5: ಅಡಿಕೆ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜ.4ರಂದು ಸಂಜೆ ವೇಳೆ ಮಾಳ ಗ್ರಾಮದ ಓರ್ಲ ಎಂಬಲ್ಲಿ ನಡೆದಿದೆ.
ಮೃತರನ್ನು ಓರ್ಲ ನಿವಾಸಿ ಸತೀಶ್ ಬರ್ವೆ(53) ಎಂದು ಗುರುತಿಸಲಾಗಿದೆ. ಇವರು ಮನೆಯ ಅಡಿಕೆ ತೋಟದಲ್ಲಿ ಅಡಿಕೆ ಮರ ಹತ್ತಿ ಅಡಕೆ ಕೊಯ್ಯುತ್ತಿರು ವಾಗ ಅಡಕೆ ಮರ ತಂಡಾಗಿ ಸುಮಾರು 60 ಅಡಿ ಮೇಲಿನಿಂದ ನೆಲಕ್ಕೆ ಬಿದ್ದು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





