ಜ. 6: ಕುತ್ಪಾಡಿಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ
ಉಡುಪಿ, ಜ.5: ಪ್ರತೀ ತಿಂಗಳ ಮೊದಲನೇ ಶನಿವಾರ ನಡೆಯುವ ‘ಸ್ವಸ್ಥ ನೇತ್ರ ದಿನ’ ಕಣ್ಣಿನ ಉಚಿತ ತಪಾಸಣಾ ಮತ್ತು ಸಲಹಾ ಶಿಬಿರ ಜ.6ರಂದು ಕುತ್ಪಾಡಿಯ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಯಲಿದೆ.
ಶಿಬಿರ ಆಸ್ಪತ್ರೆಯ ಶಾಲಕ್ಯ-ನಿಮಿ ವಿಭಾಗದ ಕೊಠಡಿ ನಂಬ್ರ 10ರಲ್ಲಿ ಬೆಳಗ್ಗೆ 9ರಿಂದ ಸಂಜೆ 4ಗಂಟೆಯವರೆಗೆ ನಡೆಯಲಿದೆ. ಕಣ್ಣಿನ ವಿವಿಧ ರೀತಿಯ ತೊಂದರೆಗಳು ವಿಶೇಷವಾಗಿ ಮಧುಮೇಹದಿಂದ ಬರುವ ಕಣ್ಣಿನ ತೊಂದರೆಯ ನಿಯಂತ್ರಣಕ್ಕಾಗಿ ಸಲಹೆ ಚಿಕಿತ್ಸೆಗಳನ್ನು ಪಡೆಯಬಹುದು.
ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ:0820-2533301 /2533302 /2533303 ನ್ನು ಸಂಪರ್ಕಿಸುವಂತೆ ಕೋರಲಾಗಿದೆ.
Next Story





