ಕಾರ್ಕಳ: ಅಕ್ರಮ ಗಣಿಗಾರಿಕೆ ವಿರುದ್ಧ ದೂರು
ಕಾರ್ಕಳ, ಜ. 5: ತಾಲೂಕಿನಲ್ಲಿ ನಡೆಯುವ ಅಕ್ರಮ ಗಣಿಗಾರಿಕೆಗೆ ದಾಳಿ ನಡೆಸಿದ ಉಡುಪಿ ಗಣಿ ಮತ್ತು ಭೂ ವಿಜ್ಞಾನಿ ಇಲಾಖೆಯ ಅಧಿಕಾರಿ ಎಚ್.ಎಸ್.ಮಹದೇಶ್ವರ ಅವರು ಹಲವರ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸೂಡಾ ಗ್ರಾಮದ ಸಿ.ಎಂ.ಜೋಯ್, ದಿನೇಶ್ ಅಮೀನ್, ಗೋಪಾಲ.ಕೆ,ಬಂಗೇರ, ದಿನೇಶ್ ಶೆಟ್ಟಿ ಎಂಬವರ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳು ಸ.ನಂ.31/ಪಿ2 ಮತ್ತು 133/ಪಿ1ನಲ್ಲಿ 15,550 ಮೆಟ್ರಿಕ್ ಟನ್ ಕಟ್ಟಡದ ಕಲ್ಲು ಕಳ್ಳತನ ನಡೆಸಿದ್ದು, ಅದರ ಮೌಲ್ಯ 25,81,300ರೂ. ಆಗಿರುತ್ತದೆ ಎಂದು ತಿಳಿದುಬಂದಿದೆ.
ಕಾರ್ಕಳ ತಾಲೂಕಿನ ಕೆದಿಂಜೆ ಗ್ರಾಮದ ನಾಗರಾಜ ಮಂಜರಪಲ್ಕೆ, ಹರೀಶ್ ಪೂಜಾರಿ, ವಿನಾಯಕ ಕಾಮತ್ ಮತ್ತು ದೀಪಕ್ ಕಾಮತ್ ಎಂಬವರ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳು ಸ.ನಂ.233, 233/ಪಿ1ರಲ್ಲಿ 4300 ಮೆಟ್ರಿಕ್ ಟನ್ ಮತ್ತು 60 ಚಪ್ಪಡಿ ಕಲ್ಲು ಕಳ್ಳತನ ನಡೆಸಿದ್ದಾರೆ. ಅದರ ಮೌಲ್ಯ 7,20,400ರೂ. ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಟ್ಟೆ ಗ್ರಾಮದ ಪರನೀರು ಪಾದೆ ಎಂಬಲ್ಲಿ ಸುಂದರ್ ರಾವ್, ಈಶ್ವರ, ಸುಬ್ರಹ್ಮಣ್ಯ, ಮಣಿ, ನಾಗರಾಜ, ಗೋಪಾಲ ಮತ್ತು ಜಯಶೀಲ ಎಂಬವರ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳು ಸ.ನಂ. 354ರಲ್ಲಿ ಕಲ್ಲು ಕಳ್ಳತನ ನಡೆಸಿದ್ದಾರೆ ಎಂದು ದೂರಲಾಗಿದೆ.







