Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಕರಾವಳಿಯ ನೆಲದ ಗುಣ ಹೇಳುವ ‘ಕಾವ್ಯ ಸಂಗಮ’

ಕರಾವಳಿಯ ನೆಲದ ಗುಣ ಹೇಳುವ ‘ಕಾವ್ಯ ಸಂಗಮ’

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ6 Jan 2018 12:21 AM IST
share
ಕರಾವಳಿಯ ನೆಲದ ಗುಣ ಹೇಳುವ ‘ಕಾವ್ಯ ಸಂಗಮ’

ಇತ್ತೀಚಿನ ದಿನಗಳಲ್ಲಿ ಕರಾವಳಿ ಸುದ್ದಿಯಾಗುತ್ತಿರುವುದು ಅಥವಾ ಮಾಧ್ಯಮಗಳು ಕರಾವಳಿಯನ್ನು ಬಿಂಬಿಸುತ್ತಿರುವುದು ಕೋಮುಗಲಭೆ ಪೀಡಿತ ನೆಲವಾಗಿ. ಮಾಧ್ಯಮಗಳು ಕರಾವಳಿಯ ನೆಲದ ಅಂತಃಸ್ಸತ್ವವನ್ನು ಬಿಂಬಿಸಲು ತೋರಿಸುವ ಅಸಕ್ತಿಗಿಂತ, ಅಲ್ಲಿ ಜೋರಾಗಿ ಸದ್ದು ಮಾಡುತ್ತಿರುವ ಕೆಲವು ಕೆಟ್ಟ ರಾಜಕೀಯ ಧ್ವನಿಯ ಕಡೆಗೆ ಹೆಚ್ಚು ಆಸಕ್ತಿ ವಹಿಸಿರುವುದರಿಂದ ತಪ್ಪು ಕಾರಣಗಳಿಗಾಗಿ ಕರಾವಳಿ ರಾಜ್ಯಾದ್ಯಂತ ಸುದ್ದಿಯಾಗುತ್ತಿದೆ. ಕರಾವಳಿಯೆಂದರೆ ಗೋವಿಂದ ಪೈ, ಶಿವರಾಮಕಾರಂತ, ಕಾರ್ನಾಡ್ ಸದಾಶಿವರಾವ್, ನಿರಂಜನ, ಬಿ. ಎಂ. ಇದಿನಬ್ಬ, ಜಯಂತ್ ಕಾಯ್ಕಿಣಿ, ಹರೇಕಳ ಹಾಜಬ್ಬ ಎನ್ನುವುದನ್ನು ಮುಂದಿನ ದಿನಗಳಲ್ಲಿ ಜನರು ಮರೆತೆ ಬಿಡುತ್ತಾರೆಯೋ ಎನ್ನುವ ಆತಂಕ ಸಜ್ಜನರದು. ಇಂತಹ ಸಂದರ್ಭದಲ್ಲಿ ಕರಾವಳಿಯ ಅಂತಃಸ್ಸತ್ವವನ್ನು ಎತ್ತಿ ಹಿಡಿಯುವ ‘ಕರಾವಳಿ ಕವಿಗಳ ಕವನ ಸಂಗ್ರಹ’ವನ್ನು ಹೊರತಂದಿದ್ದಾರೆ ಮೇಟಿ ಮುದಿಯಪ್ಪ. ಕರಾವಳಿಯ 96 ಕವಿಗಳ ಕವಿತೆಗಳನ್ನು ತಮ್ಮ ‘ಕಾವ್ಯ ಸಂಗಮ’ ಕೃತಿಗಳಲ್ಲಿ ಜೊತೆಗೂಡಿಸಿದ್ದಾರೆ. ಇದು ಕರಾವಳಿಯ ಸಮಗ್ರ ಕಾವ್ಯವನ್ನು ಅಥವಾ ಎಲ್ಲ ಕವಿಗಳನ್ನು ಒಟ್ಟು ಸೇರಿಸಿದೆ ಎಂದು ಹೇಳುವಂತಿಲ್ಲವಾದರೂ, ಗರಿಷ್ಠ ಮಟ್ಟದಲ್ಲಿ ಒಟ್ಟು ಸೇರಿಸಲು ಪ್ರಯತ್ನಿಸಿದೆ ಎನ್ನುವುದಕ್ಕೆ ಅಡ್ಡಿಯಿಲ್ಲ. ಈ ಹಿಂದೆಯೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕವಿಗಳನ್ನು ಕತೆಗಾರರನ್ನು ಒಟ್ಟು ಸೇರಿಸುವ ಪ್ರಯತ್ನವನ್ನು ಹಲವರು ಮಾಡಿದ್ದಾರೆ. ಆ ಪ್ರಯತ್ನಗಳ ಸಾಲಲ್ಲಿ ಈ ‘ಕಾವ್ಯ ಸಂಗಮ’ವನ್ನು ಸೇರಿಸಬಹುದು.

ಇಲ್ಲಿ ಕವಿತೆಗಳನ್ನು, ಕವಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಲ್ಲ ಬಗೆಯ ಚಿಂತನೆಗಳ ಕುರಿತಂತೆ ಒಲವಿರುವವರನ್ನು ಗುರುತಿಸಲಾಗಿದೆ. ಅಂಬಾತನಯ ಮುದ್ರಾಡಿ, ಅಂಶುಮಾಲಿ, ಜನಾರ್ದನ ಭಟ್, ಜಯರಾಮ ಕಾರಂತರಿಂದ ಹಿಡಿದು, ಆರ್ಕೆ ಮಣಿಪಾಲ, ನಾ. ಮೊಗಸಾಲೆ, ಗುಲಾಬಿ ಬಿಳಿಮಲೆ, ಪುರುಷೋತ್ತಮ ಬಿಳಿಮಲೆ, ಸುಬ್ರಾಯ ಚೊಕ್ಕಾಡಿ ಮೊದಲಾದವರೂ ಇದ್ದಾರೆ. ನವೋದಯ, ಬಂಡಾಯ, ನವ್ಯ, ನವ್ಯೋತ್ತರ ಎಲ್ಲವೂ ಕರಾವಳಿಯ ಕಡಲ ಅಲೆಗಳಲ್ಲಿ ಅನ್ಯೋನ್ಯವಾಗಿವೆ. ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು, ಉತ್ತರ ಕನ್ನಡದ ಬಹುಮುಖ್ಯ ಮಾನವೀಯ ಮನಸ್ಸುಗಳನ್ನು ಇಲ್ಲಿ ಒಟ್ಟು ಸೇರಿಸಲಾಗಿದೆ. ಸುಬ್ರಾಯ ಚೊಕ್ಕಾಡಿ, ವಿಷ್ಣು ನಾಯ್ಕ, ಡಾ. ಸಬಿಹಾ ಭೂಮಿಗೌಡ, ಹರಿಯಪ್ಪ ಪೇಜಾವರ, ವನರಾಗ ಶರ್ಮ, ರಾಧಾಕೃಷ್ಣ ಉಳಿಯತ್ತಡ್ಕ, ಶಶಿಲೇಖಾ ಬಿ, ಡಾ. ಶರಭೇಂದ್ರ ಸ್ವಾಮಿ, ರಾಜು ಹೆಗಡೆ, ಚಂದ್ರಕಲಾ ನಂದಾವರ, ಜ್ಯೋತಿ ಗುರುಪ್ರಸಾದ್, ಮೇಟಿ ಮುದಿಯಪ್ಪ ಮುಂತಾದ ಪ್ರಬುದ್ಧ ಕವಿ ಕವಯಿತ್ರಿಯರ ಕವನಗಳು ವರ್ಗೀಕರಣಕ್ಕೆ ಸಿಗದಂತೆ ಬದುಕಿನ ಅರ್ಥವನ್ನು, ವರ್ತಮಾನದ ತಲ್ಲಣಗಳನ್ನು ಕಾವ್ಯ ಪ್ರಕಾರದಲ್ಲಿ ದಾಖಲಿಸಿದೆ. ಯುವಕವಿಗಳ ಗೇಯ ಕವಿತೆಗಳೂ ಗಮನಾರ್ಹವಾಗಿವೆೆ.
ಮೇಟಿ ಪ್ರಕಾಶನ ಕೊಪ್ಪಳ ಹೊರತಂದಿರುವ ಈ ಕೃತಿಯ ಮುಖಬೆಲೆ 150 ರೂಪಾಯಿ. ಆಸಕ್ತರು 94486 24 331 ೂರವಾಣಿಯನ್ನು ಸಂಪರ್ಕಿಸಬಹುದು.

 

share
-ಕಾರುಣ್ಯಾ
-ಕಾರುಣ್ಯಾ
Next Story
X