Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಶಿವಮೊಗ್ಗ: ವಿಕಿಪೀಡಿಯಾದಲ್ಲಿ ಕನ್ನಡ...

ಶಿವಮೊಗ್ಗ: ವಿಕಿಪೀಡಿಯಾದಲ್ಲಿ ಕನ್ನಡ ಬಳಕೆ ಕುರಿತಂತೆ ಕಾರ್ಯಾಗಾರ

ವಾರ್ತಾಭಾರತಿವಾರ್ತಾಭಾರತಿ6 Jan 2018 6:54 PM IST
share

ಶಿವಮೊಗ್ಗ, ಜ.6: ವಿಕಿಪೀಡಿಯಾ ಒಂದು ಸ್ವಯಂ ಸೇವಾ ಸಂಸ್ಥೆಯ ರಚನೆಯಾಗಿದ್ದು, ಇದನ್ನು ಯಾರು ಬೇಕಾದರೂ ಬದಲಾಯಿಸಬಹುದು. ಇದೊಂದು ಸ್ವತಂತ್ರ ವಿಶ್ವಕೋಶವಾಗಿದೆ ಎಂದು ಅಂತರಜಾಲ ತಜ್ಞ ಯು.ಟಿ. ಪವನಜ ಹೇಳಿದ್ದಾರೆ.

ವಿಕಿಪೀಡಿಯಾದಲ್ಲಿ ಕನ್ನಡ ಎಂಬ ವಿಚಾರವಾಗಿ ಎಟಿಎನ್‍ಸಿಸಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 
2003 ರಲ್ಲಿ ಕನ್ನಡ ವಿಕಿಪೀಡಿಯಾ ಆರಂಭವಾಗಿದ್ದು. ಇದರಲ್ಲಿ ಯಾರು ಬೇಕಾದರೂ ಬರೆಯಬಹುದು. ಆದರೆ, ಅದು ಸಂಶೋಧನಾತ್ಮಕ ಮಾಹಿತಿಯನ್ನು ಒಳಗೊಂಡಿರಬೇಕು. ಉತ್ತಮ ಶೈಲಿಯಲ್ಲಿ, ಪ್ರಪಂಚಕ್ಕೆಲ್ಲ ಉಪಯೋಗವಾಗುವಂತಹ ವಿಚಾರಗಳನ್ನು ಮಾತ್ರ ಇದರಲ್ಲಿ ಬರೆಯಬಹುದು. ವೈಯಕ್ತಿಕ ಅಭಿಪ್ರಾಯ, ವಿಮರ್ಶೆ, ಕಥೆ, ಕವನ ಮುಂತಾದವುಗಳಿಗೆ ಆಸ್ಪದವಿಲ್ಲ ಎಂದರು.

ವಿಕಿಪೀಡಿಯಾದಲ್ಲಿ ಲೇಖನ ಬರೆಯುವಾಗ ಅದು ರಂಜನೀಯವಾಗಿರಬಾರದು. ಹೊಗಳಿಕೆ ಅಥವಾ ತೆಗಳಿಕೆ, ವಿಶೇಷಣ ಸಲ್ಲದು. ಕಾವ್ಯಮಯ ಶೀರ್ಷಿಕೆ, ಉಪಮೆ, ಕಥಾರೂಪ ಇರಬಾರದು. ವಿಶ್ವದ 294 ಭಾಷೆಯಲ್ಲಿ ವಿಕಿಪೀಡಿಯಾ ಲಭ್ಯವಿದ್ದು, ಇದರಲ್ಲಿ ಭಾರತದ 23 ಭಾಷೆಗಳಿವೆ ಎಂದರು.

ವಿಕಿಪೀಡಿಯಾದಲ್ಲಿ ಹೊಸ ಮಾಹಿತಿ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಬರೆಯಬಹುದು. ಪುಸ್ತಕ, ಬ್ಲಾಗ್, ಪತ್ರಿಕೆಯಲ್ಲಾಗಲಿ ಬರೆದಂತೆ ಇಲ್ಲಿ ಬರೆಯಲಾಗದು. ಏಕೆಂದರೆ ಇದು ಅಂತರಜಾಲದಲ್ಲಿ ವಿಶ್ವದಾದ್ಯಂತ ಸಿಗುವ ಮಾಹಿತಿ ಕೋಶವಾಗಿದೆ. ವಿಷಯಾಧಾರಿತವಾಗಿ ಬರೆಯುವವರಿಗೆ ಇದು ಒಳ್ಳೆಯ ಅವಕಾಶವನ್ನು ತೆರೆದಿಟ್ಟಿದೆ ಎಂದ ಅವರು ಕನ್ನಡದಲ್ಲಿ ಜಗತ್ತಿನ ಜ್ಞಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚುರಗೊಳಿಸಬೇಕು ಎಂದಾದಲ್ಲಿ ಈ ಮಾಧ್ಯಮವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.

ಇಲ್ಲಿ ಬರೆಯುವಾಗ ಶುದ್ಧ ಭಾಷೆ ವ್ಯಾಕರಣ ಸಹಿತದ ಸಾಲುಗಳು ಇರಬೇಕು. ಮಾಹಿತಿ ಸಾಹಿತ್ಯವನ್ನು ಇದು ನಿರ್ಮಿಸುವಂತಿರಬೇಕು. ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನಗಳು, ಲೇಖನಗಳು ಇದರಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಕುರಿತಂತೆ ವಿಶ್ವದಲ್ಲಿ ಈವರೆಗೆ ಕನ್ನಡದಲ್ಲಿ ಲಭ್ಯವಿರದ ಸುಮಾರು 80 ರಷ್ಟು ಲೇಖನಗಳನ್ನು ಇದರಲ್ಲಿ ಅಳವಡಿಸಲಾಗಿದೆ ಎಂದರು.

ಅಗತ್ಯ ಮಾಹಿತಿಗಳು ಕನ್ನಡದಲ್ಲೇ ನಮಗೆ ಈ ವಿಶ್ವಕೋಶದ ಮೂಲಕ ಲಭ್ಯವಾಗುತ್ತಿವೆ. ಆದರೆ ಇದರಲ್ಲಿ ಲೇಖನ ಬರೆಯುವವರು ಯಾವುದೇ ಇತರ ಆಕರಗಳಿಂದ ಮಾಹಿತಿಯನ್ನು ಪಡೆದು ಹಾಗೆಯೇ ಬರೆಯಬಾರದು. ಕೃತಿಚೌರ್ಯ ಇದರಲ್ಲಿ ನಿಷಿದ್ಧವಾಗಿದ್ದು, ಎಚ್ಚರಿಕೆಯಿಂದ ಬರೆಯುವವರನ್ನು ಇದರಲ್ಲಿ ಕಾಣಬಹುದು. ಕನ್ನಡವನ್ನು ಜನರು ಹೆಚ್ಚು ಬಳಸಬೇಕು ಎನ್ನುವವರು ಇದರ ಲಾಭ ಪಡೆಯಬಹುದು. ಕನ್ನಡದಲ್ಲಿ ಈ ವಿಶ್ವಕೋಶ ಲಭ್ಯವಾಗುವ ಮೂಲಕ ಎಲ್ಲಾ ವಿಚಾರಗಳನ್ನು, ಮಾಹಿತಿಗಳನ್ನು ನಿಖರವಾಗಿ ಪಡೆಯಲು ಸಾಧ್ಯವಾಗಿದೆ ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X