ಮಹಾರಾಷ್ಟ್ರವು ಅರಾಜಕತೆ, ಸರ್ವನಾಶದತ್ತ ಸಾಗುತ್ತಿದೆ: ಶಿವಸೇನೆ ವಿಷಾದ
ಫಡ್ನವೀಸ್ ಸರಕಾರದ ವಿರುದ್ಧ ಆಕ್ರೋಶ

ಮುಂಬೈ,ಜ.6: ಪುಣೆ ಜಿಲ್ಲೆಯ ಭೀಮಾ-ಕೋರೆಗಾಂವ್ ಗ್ರಾಮದಲ್ಲಿ ಹಿಂಸಾಚಾರ ಕುರಿತಂತೆ ದೇವೇಂದ್ರ ಫಡ್ನವೀಸ್ ಸರಕಾರದ ವಿರುದ್ಧ ತನ್ನ ದಾಳಿಯನ್ನು ಮುಂದುವರಿ ಸಿರುವ ಮಿತ್ರಪಕ್ಷ ಶಿವಸೇನೆಯು, ಜಾತಿ ಸಂಘರ್ಷದಿಂದಾಗಿ ಮಹಾರಾಷ್ಟ್ರವು ಅರಾಜಕತೆ ಮತ್ತು ಸರ್ವನಾಶದತ್ತ ಸಾಗುತ್ತಿದೆ ಎಂದು ಹೇಳಿದೆ.
ಭೀಮಾ-ಕೋರೆಗಾಂವ್‌ನಲ್ಲಿ ಹಿಂಸಾಚಾರವನ್ನು ಖಂಡಿಸಿ ಜ.3ರಂದು ದಲಿತ ಸಂಘಟನೆಗಳು ಕರೆ ನೀಡಿದ್ದ ಬಂದ್ ಸಂದರ್ಭದಲ್ಲಿ ಪ್ರತಿಭಟನಾಕಾರರಿಂದ ಆಸ್ತಿಗಳಿಗೆ ಭಾರೀ ಪ್ರಮಾಣದ ಹಾನಿಯುಂಟಾಗಿರುವುದಕ್ಕೆ ಶಿವಸೇನೆಯು ನೋವನ್ನು ವ್ಯಕ್ತಪಡಿಸಿದೆ.
ದಲಿತರು ಬಂದ್ ಕರೆಯನ್ನು ನೀಡುತ್ತಿದ್ದಾರೆ ಮತ್ತು ಹಿಂದುತ್ವವಾದಿ ಗುಂಪುಗಳು ಜಾಥಾಗಳನ್ನು ನಡೆಸುತ್ತಿವೆ. ಮಹಾರಾಷ್ಟ್ರವು ಜಾತಿ ಸಂಘರ್ಷಗಳಿಂದಾಗಿ ಪ್ರಗತಿಯ ಬದಲು ಅರಾಜಕತೆ ಮತ್ತು ವಿನಾಶದತ್ತ ಸಾಗುತ್ತಿರುವಂತಿದೆ ಎಂದು ಶಿವಸೇನೆಯ ಮುಖವಾಣಿ ’ಸಾಮ್ನಾ’ದ ಶನಿವಾರದ ಸಂಚಿಕೆಯಲ್ಲಿನ ಸಂಪಾದಕೀಯವು ಆತಂಕ ವ್ಯಕ್ತಪಡಿಸಿದೆ.
ಪ್ರಕಾಶ್ ಅಂಬೇಡ್ಕರ್ ನೇತೃತ್ವದ ಭರಿಪಾ ಬಹುಜನ ಮಹಾಜನ ಸಂಘವು ಕರೆ ನೀಡಿದ್ದ ಬಂದ್ ಶಾಂತಿಪೂರ್ಣವಾಗಿದ್ದರೆ ಓರ್ವ ನಾಯಕನಾಗಿ ಅವರ ವರ್ಚಸ್ಸು ಹೆಚ್ಚುತ್ತಿತ್ತು ಎಂದು ಹೇಳಿರುವ ಲೇಖನವು, ಅವರ ಅನುಯಾಯಿಗಳು ದಿಕ್ಕು ತಪ್ಪಿದ್ದಾರೆ. ಕೊಲ್ಲಾಪುರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ವಿರೂಪಗೊಳಿಸ ಲಾಗಿದೆ ಎಂದು ಹೇಳಿದೆ.
ಮಹಾರಾಷ್ಟ್ರದ ಅಸ್ಮಿತೆಯನ್ನು ರಕ್ಷಿಸಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಬಾರದು ಎಂದು ಶಿವಸೇನೆಯು ಬಯಸಿರುವುದರಿಂದ ಜಾತಿ ಸಂಘರ್ಷದ ಈ ಬಿಕ್ಕಟ್ಟಿನ ಸಮಯದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಏಕತೆಯನ್ನು ಪ್ರದರ್ಶಿಸುತ್ತಿದೆ ಎಂದು ಅದು ತಿಳಿಸಿದೆ.
ಜ.1ರಂದುಭೀಮಾ-ಕೋರೆಗಾಂವ್‌ನಲ್ಲಿ ನಡೆದಿದ್ದ ಘರ್ಷಣೆಗಳನ್ನು ದುರುಪಯೋಗಿಸಿ ಕೊಂಡು ರಾಜ್ಯದಲ್ಲಿ ಜಾತಿ ಹಿಂಸಾಚಾರವನ್ನು ಪ್ರಚೋದಿಸಲು ಪ್ರಯತ್ನಗಳು ನಡೆಯು ತ್ತಿವೆ ಎಂದಿರುವ ‘ಸಾಮ್ನಾ’, ಯಾವುದೇ ರೀತಿಯಲ್ಲಿಯೂ ಯಾರದೇ ಮಾತು ಕೇಳಲು ಸಿದ್ಧರಿರದ ಸಮುದಾಯದ ಜನರಲ್ಲಿ ಮನೆ ಮಾಡಿರುವ ಉದ್ವಿಗ್ನತೆಯನ್ನು ಶಮನಗೊಳಿ ಸಲು ಯಾವುದೇ ದಲಿತ ನಾಯಕರು ಪ್ರಯತ್ನಿಸಿಲ್ಲ ಎಂದಿದೆ.
ರಾಜ್ಯವ್ಯಾಪಿ ಬಂದ್ ಸಂದರ್ಭದಲ್ಲಿ ಆಸ್ತಿಪಾಸ್ತಿಗಳಿಗೆ ಕೋಟ್ಯಂತರ ರೂ.ಗಳ ಹಾನಿಯುಂಟಾಗಿದೆ. ಮೊದಲೇ ಆರ್ಥಿಕ ದುಸ್ಥಿತಿಯಲ್ಲಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೊಂದಕ್ಕೇ 25 ಕೋ.ರೂ.ಗಳ ನಷ್ಟವಾಗಿದೆ ಎಂದಿರುವ ಸಂಪಾದಕೀಯವು, ಜಾತಿ ಸಂಘರ್ಷವು ಬಿಜೆಪಿ ಅಥವಾ ಇತರ ಯಾವುದೇ ಪಕ್ಷಕ್ಕೆ ಲಾಭ ತರಲಿದೆಯೇ ಎನ್ನುವು ದನ್ನು ವಿಶ್ಲೇಷಿಸಲು ಇದು ಕಾಲವಲ್ಲ ಎಂದು ಹೇಳಿದೆ.