ಜ.14 - 28ರಂದು ಇಸ್ಲಾಮಿಕ್ ಎಜುಕೇಶನ್ ವಾರ್ಷಿಕ ಪರೀಕ್ಷೆ
ಉಡುಪಿ, ಜ.6: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ಇದರ ವಾರ್ಷಿಕ ಪರೀಕ್ಷೆಯು ಜ.14 ಮತ್ತು 28ರಂದು ರಾಜ್ಯಾದ್ಯಂತ ಆಯಾಯ ಕೇಂದ್ರಗಳಲ್ಲಿ ನಡೆಯಲಿದೆ.
ಈಗಾಗಲೇ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳು ಇಸ್ಲಾಮಿಕ್ ಸರ್ಟಿ ಫಿಕೇಟ್ ಹಾಗೂ ಡಿಪ್ಲೊಮೊ ಇನ್ ಇಸ್ಲಾಮಿಕ್ ಸ್ಟಡೀಸ್ ಕೋರ್ಸ್‌ಗಳಿಗೆ ಪರೀಕ್ಷೆ ಬರೆಯಲಿದ್ದಾರೆ.
ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಮಲ್ಪೆ, ಕಾಪು, ಕಾರ್ಕಳ, ತೋನ್ಸೆ, ಕಿರಿಮಂಜೇಶ್ವರ, ಆದಿಉಡುಪಿ, ಗಂಗೊಳ್ಳಿ ಸೇರಿದಂತೆ ರಾಜ್ಯಾದ್ಯಂತ 300ಕ್ಕೂ ಅಧಿಕ ಬೋರ್ಡ್‌ನ ಕೇಂದ್ರಗಳಿವೆ. ಪರೀಕ್ಷೆಯು ಬೆಳಗ್ಗೆ 10ಗಂಟೆಯಿಂದ ಮದ್ಯಾಹ್ನ 1ರವರೆಗೆ ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ನಡೆಯಲಿದೆ ಎಂದು ಉಡುಪಿ ಕೇಂದ್ರದ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





