ಕಮಲಾ ಮಿಲ್ ಅಗ್ನಿದುರಂತ: ಪಬ್‌ನ ಓರ್ವ ಮಾಲಕನ ಬಂಧನ

ಮುಂಬೈ, ಜ.6: ಕಮಲಾ ಮಿಲ್‌ನಲ್ಲಿ ಡಿ.29ರಂದು ಸಂಭವಿಸಿದ ಭೀಕರ ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿ, ಪೊಲೀಸರು ‘ಮೊಜೋಸ್ ಬಿಸ್ಟ್ರೊ’ ಪಬ್‌ನ ಓರ್ವ ಮಾಲಕ ಯುಗ್ ಪಾಠಕ್‌ನನ್ನು ಬಂಧಿಸಿದ್ದಾರೆ.
ಪಬ್‌ನ ಇನ್ನೊಬ್ಬ ಮಾಲಕನ ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪಬ್‌ನ ಇಬ್ಬರು ಮಾಲಕರ ವಿರುದ್ಧ ಪೊಲೀಸರು ನರಹತ್ಯೆಯಲ್ಲದ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಈ ಮಧ್ಯೆ, ಅಗ್ನಿದುರಂತಕ್ಕೆ ಸಂಬಂಧಿಸಿ ಅಧಿಕಾರಿಗಳು ಕಮಲಾ ಮಿಲ್ಸ್ ಕಟ್ಟಡ ಸಂಕೀರ್ಣದಲ್ಲಿದ್ದ ‘ 1 ಎಬೌ’ ರೆಸ್ಟಾರೆಂಟ್‌ನ ಮೂವರು ಮಾಲಕರಾದ ಕೃಪೇಶ್ ಮನ್‌ಸುಖ್‌ಲಾಲ್ ಸಂಘ್ವಿ, ಜಿಗರ್ ಸಂಘ್ವಿ ಹಾಗೂ ಅಭಿಜೀತ್ ಮಂಕಾರ್ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂವರೂ ಇನ್ನೂ ತಲೆತಪ್ಪಿಸಿಕೊಂಡಿದ್ದು ಇವರ ವಿರುದ್ಧ ‘ಲುಕ್‌ಔಟ್’ ನೋಟಿಸ್ ಜಾರಿಯಾಗಿದೆ. ಸೋಮವಾರ ‘1 ಎಬೌ’ ರೆಸ್ಟಾರೆಂಟ್‌ನ ಇಬ್ಬರು ಮ್ಯಾನೇಜರ್‌ಗಳನ್ನು ಪೊಲೀಸರು ಬಂಧಿಸಿದ್ದರು.
Next Story