ಜ. 8ರಿಂದ ಲೈಫ್‌ಲೈನ್ ಹೆಲ್ತ್‌ಕೇರ್ ಪ್ಲಸ್ ವತಿಯಿಂದ ಉಚಿತ ತಪಾಸಣಾ ಶಿಬಿರ
ಬಿ.ಸಿ.ರೋಡು, ಜ. 6: ಬಿ.ಸಿ.ರೋಡ್, ಕೈಕಂಬ ಲೈಫ್‌ಲೈನ್ ಹೆಲ್ತ್‌ಕೇರ್ ಪ್ಲಸ್ ವತಿಯಿಂದ ಉಚಿತ ಕಿವಿ, ಮೂಗು, ಗಂಟಲು ಹಾಗೂ ಶ್ರವಣ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈ ಉಚಿತ ತಪಾಸಣಾ ಶಿಬಿರವು ಜ.8 ರಿಂದ ಜ.13ರ ವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಆಯೋಜಿಲಾಗಿದೆ.
ಶಿಬಿರದ ಪ್ರಯುಕ್ತ ಉಚಿತ ಆಡಿಯೋಮೆಟ್ರಿ ಪರೀಕ್ಷೆ, ಇಎನ್‌ಟಿ ತಜ್ಞರಿಂದ ಉಚಿತ ಸಲಹೆ ಹಾಗೂ ಪರೀಕ್ಷೆ ಸೌಲಭ್ಯವಿದೆ. ಕಿವಿ ಸೋರುವುದು, ಅಲರ್ಜಿ, ಗಂಟಲು ನೋವು, ಮೂಗು ಕಟ್ಟುವುದು, ಗೊರಕೆ, ತಲೆ ನೋವು ಇತ್ಯಾದಿ ಕಿವಿ, ಮೂಗು, ಗಂಟಲಿಗೆ ಸಂಬಂಧಿಸಿದ ಕಾಯಿಲೆಗಳಿದ್ದಲ್ಲಿ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಖ್ಯಾತ ಇಎನ್‌ಟಿ ತಜ್ಞರಾದ ಡಾ. ದಿವ್ಯಾ ದಾಮೋದರ್ ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸಂದರ್ಶನಕ್ಕೆ ಮುಂಚಿತವಾಗಿ ನೋಂದಾಯಿಸಲು ಸಂಪರ್ಕಿಸಿ 08255-230444/ 9686246244/ 9481363943. ಇಎನ್‌ಟಿ ತಜ್ಙಾರಾದ ಡಾ. ದಿವ್ಯಾ ದಾಮೋದರ್ ಪ್ರತೀ ಸೋಮವಾರದಿಂದ ಶನಿವಾರ ಬೆಳಗ್ಗೆ 9:30 ರಿಂದ ಮಧ್ಯಾಹ್ನ 2:30ರವರೆಗೆ ಲೈಫ್‌ಲೈನ್ ಹೆಲ್ತ್‌ಕೇರ್ ಪ್ಲಸ್‌ನಲ್ಲಿ ಸಂದರ್ಶನಕ್ಕೆ ಲಭ್ಯರಿರುತ್ತಾರೆ.







