ಅಯ್ಯಪ್ಪಸ್ವಾಮಿ ವೃತಧಾರಿ ನಾಪತ್ತೆ
ಕುಂದಾಪುರ, ಜ.6: ಅಯ್ಯಪ್ಪ ಸ್ವಾಮಿ ವೃತಧಾರಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದವರನ್ನು ಗಂಗೊಳ್ಳಿ ಗ್ರಾಮದ ಖಾರ್ವಿಕೇರಿಯ ರವಿ ಕಾನೋಜಿ ಎಂಬವರ ಪುತ್ರ ಅಮೃತ್ ಕಾನೋಜಿ(23) ಎಂದು ಗುರುತಿಸಲಾಗಿದೆ.
ಕುಂದಾಪುರ ವಿನಾಯಕ ಟಾಕೀಸ್ ಬಳಿಯ ಜ್ಯೂಸ್ ಸೆಂಟರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಅಮೃತ್ ಕಾನೋಜಿ ನ. 29ರಿಂದ ಅಯ್ಯಪ್ಪಸ್ವಾಮಿ ಮಾಲೆ ಹಾಕಿ ಕುಂದಾಪುರದ ಬಾಬು ಗುರು ಸ್ವಾಮಿಯವರ ಶಿಬಿರದಲ್ಲಿ ಉಳಿದುಕೊಳ್ಳುತ್ತಿದ್ದರು. ಜ.3ರಂದು ಕೆಲಸಕ್ಕೆ ಹೋಗಿ ಬೆಳಗ್ಗೆ 8:30ರ ಸುಮಾರಿಗೆ ಅಲ್ಲಿಂದ ಗಂಗೊಳ್ಳಿಯಲ್ಲಿರುವ ಮನೆಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story





