ಕಮಲ್ ಹಾಸನ್ ವಿರುದ್ಧ ವಕೀಲರ ಪ್ರತಿಭಟನೆ

ಕೊಯಂಬತ್ತೂರು, ಜ. 6: ಎಐಎಡಿಎಂಕೆ ಬಂಡಾಯ ನಾಯಕ ಹಾಗೂ ನೂತನವಾಗಿ ಆಯ್ಕೆಯಾಗಿರುವ ಶಾಸಕ ಟಿಟಿವಿ ದಿನಕರ್ ಪರ ವಕೀಲರ ಗುಂಪೊಂದು ಕಮಲ್ ಹಾಸನ್ ಹೇಳಿಕೆ ಕುರಿತಂತೆ ಇಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಅವರ ಭಾವಚಿತ್ರ ದಹಿಸಿತು ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 21ರಂದು ನಡೆದ ಆರ್.ಕೆ. ನಗರ್ ಉಪಚುನಾವಣೆಯಲ್ಲಿ ಹಣದ ಶಕ್ತಿಯಿಂದ ದಿನಕರನ್ ಜಯ ಗಳಿಸಿದ್ದಾರೆ ಎಂದು ಕಮಲ್ ಹಾಸನ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯದ ಮುಂದೆ ಪ್ರತಿಭಟನೆ ನಡೆಸಿದ ವಕೀಲರು ಕಮಲ್ ಹಾಸನ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ತಮಿಳು ಮ್ಯಾಗಝಿನ್ ಆನಂದ ವಿಕಟನ್‌ನ ಕಾಲಂ ಒಂದರಲ್ಲಿ ಕಮಲ್ ಹಾಸನ್, ಆರ್.ಕೆ. ನಗರ ಉಪಚುನಾವಣೆ ಭಾರತದ ಪ್ರಜಾಪ್ರಭುತ್ವಕ್ಕೆ ಅಂಟಿದ ಕಳಂಕ ಎಂದಿದ್ದರು. ಕಮಲ್ ಹಾಸನ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ದಿನಕರನ್ ಅವರು ಕಮಲ್ ಹಾಸನ್‌ಗೆ ಆರ್.ಕೆ. ನಗರ್‌ನ ನನ್ನ ವಿಜಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದರು.
Next Story