ಶತಕ ವಂಚಿತ ಹಾರ್ದಿಕ್ ಪಾಂಡ್ಯ
►ಮೊದಲ ಇನಿಂಗ್ಸ್‌ನಲ್ಲಿ ಭಾರತ 209ಕ್ಕೆ ಆಲೌಟ್ ► ಆಫ್ರಿಕ ಮೇಲುಗೈ

ಕೇಪ್‌ಟೌನ್, ಜ.6: ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ನಲ್ಲಿ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 77 ರನ್‌ಗಳ ಹಿನ್ನಡೆ ಅನುಭವಿಸಿದೆ. ಟೆಸ್ಟ್‌ನ ಎರಡನೇ ದಿನವಾಗಿರುವ ಶನಿವಾರ ಭಾರತ ಮೊದಲ ಇನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿ 73.4 ಓವರ್‌ಗಳಲ್ಲಿ 209 ರನ್‌ಗಳಿಗೆ ಆಲೌಟಾಗಿದೆ.
ಶುಕ್ರವಾರ ದಿನದಾಟದಂತ್ಯಕ್ಕೆ 11 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 28 ರನ್ ಗಳಿಸಿದ್ದ ಭಾರತ ಶನಿವಾರ ಬ್ಯಾಟಿಂಗ್ ಮುಂದುವರಿಸಿ ಈ ಮೊತ್ತಕ್ಕೆ 181 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ ಕುಮಾರ್ 8ನೇ ವಿಕೆಟ್‌ಗೆ 99 ರನ್‌ಗಳ ಜೊತೆಯಾಟ ನೀಡಿದರು. 92ಕ್ಕೆ 7 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾವನ್ನು ಪಾಂಡ್ಯ ಮತ್ತು ಬೌಲರ್ ಭುವನೇಶ್ವರ ಕುಮಾರ್ ಹೋರಾಟದ ಮೂಲಕ ಸಂಕಷ್ಟದಿಂದ ಪಾರು ಮಾಡಲು ಶ್ರಮಿಸಿದರು. ಅಗ್ರ ಸರದಿಯ ದಾಂಡಿಗರೆಲ್ಲ ಔಟಾಗಿ ಪೆವಿಲಿಯನ್ ಹಾದಿ ಹಿಡಿದಾಗ ಪಾಂಡ್ಯ ಮತ್ತು ಭುವನೇಶ್ವರ ಕುಮಾರ್ ತಂಡವನ್ನು ಆಧರಿಸಿದರು. ಪಾಂಡ್ಯ ಎರಡನೇ ಶತಕ ದಾಖಲಿಸುವ ಯೋಜನೆಯಲ್ಲಿದ್ದರು. ಆದರೆ ಅವರು 93ರಲ್ಲಿ ಔಟಾಗಿ ನಿರ್ಗಮಿಸಿದರು. ವೇಗವಾಗಿ ಅರ್ಧಶತಕ ದಾಖಲಿಸಿದ್ದ ಪಾಂಡ್ಯ ಅವರು ಬಳಿಕ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಆದರೆ 93ರಲ್ಲಿ ಔಟಾಗಿ ಪೆವಿಲಿಯನ್ ಸೇರುವುದರೊಂದಿಗೆ ಎರಡನೇ ಶತಕ ವಂಚಿತಗೊಂಡರು.
ಪಾಂಡ್ಯ ಎರಡು ಬಾರಿ ಜೀವದಾನ ಪಡೆದಿದ್ದರು. 15ರಲ್ಲಿದ್ದಾಗ ಡೀನ್ ಎಲ್ಗರ್ ಕ್ಯಾಚ್ ಕೈ ಚೆಲ್ಲಿದ ಪರಿಣಾಮವಾಗಿ ಜೀವದಾನ ಪಡೆದಿದ್ದರು. 71ರನ್ ಮಾಡಿದ್ದಾಗ ಸ್ಟಂಪಿಂಗ್ ಅವಕಾಶದಿಂದ ಪಾರಾದರು. ಟೀ ವಿರಾಮದ ವೇಳೆಗೆ ಭಾರತ 7ವಿಕೆಟ್ ನಷ್ಟದಲ್ಲಿ 185 ರನ್ ಗಳಿಸಿತ್ತು. ಬಳಿಕ ಈ ಮೊತ್ತಕ್ಕೆ 24 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ.
►ಮತ್ತೆ ಬೌಲರ್‌ಗಳ ಪ್ರಾಬಲ್ಯ: ಮೊದಲ ದಿನ 27ಕ್ಕೆ 3 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದ ಭಾರತ ಎರಡನೇ ದಿನ ದಕ್ಷಿಣ ಆಫ್ರಿಕದ ಬೌಲರ್‌ಗಳಾದ ವೆರ್ನಾನ್ ಫಿಲ್ಯಾಂಡರ್(33ಕ್ಕೆ 3), ಡೇಲ್ ಸ್ಟೇಯ್ನೆ(51ಕ್ಕೆ 2),ಕಾಗಿಸೊ ರಬಾಡ(34ಕ್ಕೆ 3), ಮತ್ತು ಮೊರ್ನೆ ಮೊರ್ಕೆಲ್(57ಕ್ಕೆ 2) ದಾಳಿಯನ್ನು ಎದುರಿಸಲಾರದೆ ಫಾಲೋಆನ್ ಭೀತಿಗೆ ಸಿಲುಕಿತ್ತು.
ಪಾಂಡ್ಯಾಆಲ್‌ರೌಂಡ್ ಪ್ರದರ್ಶನ
ಪ್ರಥಮ ಇನಿಂಗ್ಸ್‌ನಲ್ಲಿ ಏಕಾಂಗಿ ಹೋರಾಟದ ಮೂಲಕ ಟೀಮ್ ಇಂಡಿಯಾವನ್ನು ಫಾಲೋ ಆನ್ ಭೀತಿಯಿಂದ ಪಾರು ಮಾಡಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾ ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದಾರೆ. ಎರಡನೇ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ಗೆ 52 ರನ್‌ಗಳ ಜೊತೆಯಾಟ ನೀಡಿದ್ದ ಆರಂಭಿಕ ದಾಂಡಿಗರಾದ ಏಡೆನ್ ಮಾರ್ಕೂಮ್(32) ಮತ್ತು ಡೀನ್ ಎಲ್ಗರ್(25) ಅವರ ವಿಕೆಟ್‌ನ್ನು ಪಾಂಡ್ಯಾ ಉಡಾಯಿಸಿದ್ದಾರೆ. ದಿನದಾಟದಂತ್ಯಕ್ಕೆ ದಕ್ಷಿಣ ಆಫ್ರಿಕ ಎರಡನೇ ಇನಿಂಗ್ಸ್ ನಲ್ಲಿ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 65 ರನ್ ಗಳಿಸಿದೆ. ಕಾಗಿಸೊ ರಬಾಡ ಔಟಾಗದೆ 2ರನ್ ಮತ್ತು ಹಾಶೀಮ್ ಅಮ್ಲ ಔಟಾಗದೆ 4 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕ 142 ರನ್‌ಗಳ ಮುನ್ನಡೆ ಸಾಧಿಸಿದೆ.
ಸ್ಕೋರ್ ವಿವರ
►ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್: 286/10
►ಭಾರತ ಮೊದಲ ಇನಿಂಗ್ಸ್: 73.4 ಓವರ್‌ಗಳಲ್ಲಿ 209/10
ವಿಜಯ್ ಸಿ ಎಲ್ಗರ್ ಬಿ ಫಿಲ್ಯಾಂಡರ್01
ಧವನ್ ಸಿ ಮತ್ತು ಬಿ ಸ್ಟೇಯ್ನ 16ೇತೇಶ್ವರ ಪೂಜಾರ ಸಿ ಪ್ಲೆಸಿಸ್ ಬಿ ಫಿಲ್ಯಾಂಡರ್ 26
ವಿರಾಟ್ ಕೊಹ್ಲಿ ಸಿ ಡಿಕಾಕ್ ಬಿ ಮೊರ್ಕೆಲ್ 05
ರೋಹಿತ್ ಶರ್ಮ ಎಲ್ಬಿಡಬ್ಲು ರಬಾಡ 11ರ್.ಅಶ್ವಿನ್ ಸಿ ಡಿಕಾಕ್ ಬಿ ಫಿಲ್ಯಾಂಡರ್ 12
ಹಾರ್ದಿಕ್ ಪಾಂಡ್ಯ ಸಿ ಡಿಕಾಕ್ ಬಿ ರಬಾಡ 93
ಸಹಾ ಎಲ್ಬಿಡಬ್ಲು ಸ್ಟೇಯ್ನಿ 00
ಭುವನೇಶ್ವರ ಕುಮಾರ್ ಸಿ ಡಿಕಾಕ್ ಬಿ ಮೊರ್ಕೆಲ್ 25
ಶಮಿ ಔಟಾಗದೆ 04
ಬುಮ್ರಾ ಸಿ ಎಲ್ಗರ್ ಬಿ ರಬಾಡ 02
ಇತರೆ 14
►ವಿಕೆಟ್ ಪತನ: 1-16, 2-18, 3-27, 4-57, 5-76, 6-81, 7-92, 8-191, 9-199, 10-209
►ಬೌಲಿಂಗ್ ವಿವರ:
ಫಿಲ್ಯಾಂಡರ್14.3-8-33-3
ಸ್ಟೇಯ್ನ 17.3-6-51-2
ಮೊರ್ಕೆಲ್ 19-06-57-2
ಕಾಗಿಸೊ ರಬಾಡ 16.4-4-34-3
ಮಹಾರಾಜ್ 6-0-20-0







