ಹಸ್ಸಿ ಚೆನ್ನೈ ಬ್ಯಾಟಿಂಗ್ ಕೋಚ್
ಚೆನ್ನೈ, ಜ.6: ಆಸ್ಟ್ರೇಲಿಯದ ಕ್ರಿಕೆಟಿಗ ಮೈಕಲ್ ಹಸ್ಸಿ ಅವರು ಐಪಿಎಲ್‌ನ ಮುಂದಿನ ಆವೃತ್ತಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಹಸ್ಸಿ ಅವರು ಸಿಎಸ್‌ಕೆ ತಂಡದಲ್ಲಿ 2008ರಿಂದ 2013ರ ತನಕ ಇದ್ದರು. ಸಿಎಸ್‌ಕೆ ಎರಡು ಬಾರಿ ಚಾಂಪಿಯನ್ ಆಗಿತ್ತು. 2014ರಲ್ಲಿ ಹಸ್ಸಿ ಅವರು ಮುಂಬೈ ತಂಡಕ್ಕೆ ಹರಾಜಿನ ಮೂಲಕ ಸೇರ್ಪಡೆಗೊಂಡಿದ್ದರು. ಹಸ್ಸಿ ಅವರು ಸಿಎಸ್‌ಕೆ ಪರ 1,768 ರನ್ ದಾಖಲಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡು ವರ್ಷಗಳ ನಿಷೇಧದ ಬಳಿಕ ಐಪಿಎಲ್‌ಗೆ ಮರಳಿದೆ. ಎಂಎಸ್ ಧೋನಿ, ಸುರೇಶ್ ರೈನಾ ಮತ್ತು ರವೀಂದ್ರ ಜಡೇಜಾ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರ್ಪಡೆಗೊಂಡಿದ್ದಾರೆ.
Next Story





