ಎಲಿನಾ ಸ್ವಿಟೋಲಿನಾಗೆ ಸಿಂಗಲ್ಸ್ ಕಿರೀಟ
ಬ್ರಿಸ್ಬೇನ್ ಇಂಟರ್‌ನ್ಯಾಶನಲ್

ಬ್ರಿಸ್ಬೇನ್, ಜ.6: ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಅವರು ಬ್ರಿಸ್ಬೇನ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಸ್ವಿಟೋಲಿನಾ ಅವರು ಇಂದು ನಡೆದ ಫೈನಲ್‌ನಲ್ಲಿ ಬೆಲಾರಸ್‌ನ ಅಲಿಯಾಕ್ಸಾಂಡ್ರಾ ಸಸನೊವಿಚ್ ವಿರುದ್ಧ 6-2, 6-1 ಅಂತರದಿಂದ ಜಯ ಗಳಿಸಿ ಪ್ರಶಸ್ತಿ ಬಾಚಿಕೊಂಡರು. 23ರ ಹರೆಯದ ಸ್ವಿಟೋಲಿನಾ ಅವರು ಅಗ್ರ ಶ್ರೇಯಾಂಕದ ಜೋಹಾನ್ನಾ ಕೊಂಟಾ ಮತ್ತು ಕರೋಲಿನಾ ಪ್ಲಿಸ್ಕೋವಾ ಅವರನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ಸಸನೊವಿಚ್ ಅವರು ಡಬ್ಲುಟಿಎ ಟೂರ್‌ನಲ್ಲಿ ಮೊದಲ ಬಾರಿ ಆಡಿದ್ದರು. ಸ್ವಿಟೋಲಿನಾ ಅವರು 10ನೇ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
Next Story





