ಹಸಿವು ನೀಗಿಸುವುದು ದೊಡ್ಡ ಸತ್ಕರ್ಮ: ಯು.ಟಿ.ಖಾದರ್

ಮಂಗಳೂರು, ಜ.7: ಬಡ, ಅಶಕ್ತ ಜನರ ಹಸಿವು ನೀಗಿಸುವ ಕಾರ್ಯ ಅತ್ಯುತ್ಕೃಷ್ಟವಾದದ್ದು. ಎಲ್ಲರ ಸಹಕಾರದೊಂದಿಗೆ ಫಲಾನುಭವಿಗಳ ಹೊಟ್ಟೆ ತಣಿಸುವ ಈ ಕಾರ್ಯ ಮುಂದುವರಿಯಲಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಎಂ.ಫ್ರೆಂಡ್ಸ್ ವತಿಯಿಂದ ಆರಂಭಿಸಲಾಗಿರುವ ರೋಗಿಗಳ ಜೊತೆಗಾರರಿಗೆ ಭೋಜನ ವ್ಯವಸ್ಥೆ "ಕಾರುಣ್ಯ" ಯೋಜನೆಗೆ ಅವರು ಶನಿವಾರ ರಾತ್ರಿ ಭೇಟಿ ನೀಡಿ ಮಾತನಾಡಿದರು.
ಈ ವೇಳೆ ಎಂ.ಫ್ರೆಂಡ್ಸ್ ಗೌರವಾಧ್ಯಕ್ಷರೂ ಆಗಿರುವ ಯು.ಟಿ.ಖಾದರ್ ಆಹಾರ ಪದಾರ್ಥಗಳನ್ನು ವಿತರಿಸಿದರು.
ಎಂ.ಫ್ರೆಂಡ್ಸ್ ಅಧ್ಯಕ್ಷರಾದ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಕೋಶಾಧಿಕಾರಿ ಅಬೂಬಕರ್ ನೋಟರಿ, ಉಪಾಧ್ಯಕ್ಷರಾದ ಸುಜಾ ಮುಹಮ್ಮದ್, ಆರಿಫ್ ಪಡುಬಿದ್ರೆ, ನಿರ್ದೇಶಕ ವಿ.ಎಚ್.ಅಶ್ರಫ್, ಕಾರ್ಯದರ್ಶೀ ಆಶಿಕ್ ಕುಕ್ಕಾಜೆ, ಟ್ರಸ್ಟಿಗಳಾದ ಝುಬೈರ್, ಇರ್ಶಾದ್ ತುಂಬೆ, ಹಿದಾಯ ಫೌಂಡೇಶನ್ ನ ತನ್ವೀರ್ ದುಬೈ, ಬಾವಾ ದುಬೈ, ಕಿನ್ಯ ಗ್ರಾಪಂ ಉಪಾಧ್ಯಕ್ಷ ಸಿರಾಜ್ ಕಿನ್ಯ, ಜವಾನ್ ಫ್ರೆಂಡ್ಸ್ ಉಪಾಧ್ಯಕ್ಷ ಸತ್ತಾರ್ ನಂದರಬೆಟ್ಟು, ರಫೀಕ್ ತುಂಬೆ ಈ ಸಂದರ್ಭ ಉಪಸ್ಥಿತರಿದ್ದರು.







