Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಖಿನ್ನತೆ ಕುರಿತ ಈ ಹತ್ತು ಮಿಥ್ಯೆಗಳು...

ಖಿನ್ನತೆ ಕುರಿತ ಈ ಹತ್ತು ಮಿಥ್ಯೆಗಳು ನಿಮಗೆ ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ7 Jan 2018 5:01 PM IST
share
ಖಿನ್ನತೆ ಕುರಿತ ಈ ಹತ್ತು ಮಿಥ್ಯೆಗಳು ನಿಮಗೆ ಗೊತ್ತೇ?

ವಿಶ್ವಾದ್ಯಂತ 35 ಕೋಟಿಗೂ ಅಧಿಕ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳು ಹೇಳುತ್ತಿವೆ. ಇದು ಬೃಹತ್ ಸಂಖ್ಯೆಯಾಗಿದೆ. ಇತರ ಕಾಯಿಲೆಗಳಂತೆ ಖಿನ್ನತೆಯೂ ಕೆಲವು ಮಿಥ್ಯೆಗಳೊಂದಿಗೆ ತಳುಕು ಹಾಕಿಕೊಂಡಿದೆ. ಇಂತಹ ಮಿಥ್ಯೆಗಳು ಮತ್ತು ಸತ್ಯಗಳು ಇಲ್ಲಿವೆ.

ಮಿಥ್ಯೆ 1: ಖಿನ್ನತೆ ನಿಜವಾಗಿ ಕಾಯಿಲೆಯಲ್ಲ

ಖಿನ್ನತೆ ದುಃಖದ ತೀವ್ರತರ ರೂಪ, ಅದು ಕಾಯಿಲೆಯಲ್ಲ. ವ್ಯಕ್ತಿ ಹೆಚ್ಚು ಆಶಾವಾದಿ ಯಾದರೆ ಖಿನ್ನತೆಯಿಂದ ಹೊರಬರಬಲ್ಲ ಎನ್ನುವುದು ಹೆಚ್ಚಿನವರ ಅಭಿಪ್ರಾಯವಾಗಿದೆ. ಖಿನ್ನತೆಯಿಂದ ಬಳಲುತ್ತಿರುವ ಹೆಚ್ಚಿನವರು ಉದ್ದೇಶಪೂರ್ವಕವಾಗಿಯೇ ತಮ್ಮ ದುಃಖದ ಕೂಪದಲ್ಲಿಯೇ ಉಳಿಯಲು ಬಯಸುತ್ತಾರೆ ಎಂದು ಬಹಳಷ್ಟು ಜನರು ಆರೋಪಿಸು ತ್ತಾರೆ.

ಸತ್ಯ: ಖಿನ್ನತೆಯೊಂದು ಗಂಭೀರ ಮಾನಸಿಕ ಕಾಯಿಲೆಯಾಗಿದ್ದು, ಈ ಜಗತ್ತಿನಲ್ಲಿ ಮತ್ತು ಈ ಪಿಡುಗಿನಿಂದ ಬಳಲುತ್ತಿರುವ ವ್ಯಕ್ತಿಯ ಬದುಕಿನಲ್ಲಿ ಯಾವುದೂ ಎಂದಿಗೂ ಸರಿಯಾಗುವುದಿಲ್ಲ ಎಂಬ ಅತಾರ್ಕಿಕ ಭಾವನೆಯೊಂದಿಗೆ ಗುರುತಿಸಿಕೊಂಡಿದೆ. ವಾಸ್ತವದಲ್ಲಿ ಖಿನ್ನತೆಗೊಳಗಾದ ವ್ಯಕ್ತಿಗಳು ಈ ನಕಾರಾತ್ಮಕ ಸುಳಿಯಲ್ಲಿ ಎಷ್ಟೊಂದು ಆಳವಾಗಿ ಸಿಕ್ಕಿಹಾಕಿಕೊಂಡಿರುತ್ತಾರೆ ಎಂದರೆ ಅವರು ತಿಂಗಳು ಅಥವಾ ವರ್ಷಗಟ್ಟಲೆ ಕಾಲ ಊಟ, ನಿದ್ರೆಯನ್ನೂ ಸರಿಯಾಗಿ ಮಾಡುವುದಿಲ್ಲ, ಸಾಮಾನ್ಯ ಆರೋಗ್ಯ ಕಾಯ್ದುಕೊಳ್ಳುವುದನ್ನೂ ಮರೆಯುತ್ತಾರೆ.

ಮಿಥ್ಯೆ 2: ಖಿನ್ನತೆಯನ್ನು ಖಿನ್ನತೆ ಶಮನಕಾರಕಗಳ ಮೂಲಕ ಗುಣಪಡಿಸಬಹುದು

ಸತ್ಯ: ಒಂದು ಹಂತದಲ್ಲಿ ಖಿನ್ನತೆ ಶಮನಕಾರಕ ಖಿನ್ನತೆಯ ಚಿಕಿತ್ಸೆಗೆ ಏಕಮಾರ್ಗ ಮಾರ್ಗವಾಗಿತ್ತು. ಆದರೆ ಖಿನ್ನತೆ ನಿವಾರಕ ಮಾತ್ರೆಗಳನ್ನು ನುಂಗುವುದೆಂದರೆ ಗುಂಡಿನಿಂದ ಆದ ಗಾಯಕ್ಕೆ ಬ್ಯಾಂಡ್‌ಏಯ್ಡಾ ಹಚ್ಚಿದಂತಾಗಬಹುದು ಎನ್ನುವುದನ್ನು ಹೆಚ್ಚಿನ ಸಂಶೋಧನೆಗಳು ಬೆಟ್ಟು ಮಾಡಿವೆ. ಏಕೆಂದರೆ, ಖಿನ್ನತೆ ನಿವಾರಕ ಔಷಧಿಗಳು ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಯನ್ನು ತರುತ್ತವೆ ಮತ್ತು ವ್ಯಕ್ತಿಯನ್ನು ಮಂಪರಿಗೆ ತಳ್ಳುತ್ತವೆ.

ಖಿನ್ನತೆಗೆ ಪರಿಪೂರ್ಣವಾದ ಚಿಕಿತ್ಸೆ ಇನ್ನೂ ಲಭ್ಯವಿಲ್ಲ. ಖಿನ್ನತೆಗೊಳಗಾದ ಹೆಚ್ಚಿನವರು ಅದರಿಂದ ಚೇತರಿಸಿಕೊಡ ಬಳಿಕವೂ ಮತ್ತೆ ಅದರ ಸುಳಿಯಲ್ಲಿ ಸಿಲುಕುತ್ತಾರೆ. ವಿಜ್ಞಾನವು ಮುಂದುವರಿಯುತ್ತಿದೆ ಮತ್ತು ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ ಮತ್ತು ಸೆರೊಟೊನಿನ್ ಸಮೃದ್ಧ ಆಹಾರ ಸೇವನೆಯಂತಹ ಹಲವಾರು ಚಿಕಿತ್ಸಾ ವಿಧಾನಗಳಿವೆ. ಖಿನ್ನತೆ ನಿವಾರಕ ಇಂತಹ ವಿಧಾನಗಳಲ್ಲಿ ಒಂದಾಗಿದೆ ಅಷ್ಟೇ,ಅದೂ ಆಗಾಗ್ಗೆ ಆತ್ಮಹತ್ಯೆಯ ಬಗ್ಗೆ ಯೋಚಿಸುವ ರೋಗಿಗಳಿಗಾಗಿ.

ಮಿಥ್ಯೆ 3: ಬಯಸಿದರೆ ಖಿನ್ನತೆಯಿಂದ ಹೊರಬರಬಹುದು

ಖಿನ್ನತೆಯು ವ್ಯಕ್ತಿಯು ಬಯಸಿದರೆ ಹೊರಬರಬಹುದಾದ ದುಃಖದ ಒಂದು ರೂಪ ಎಂದು ಹೆಚ್ಚಿನವರು ಭಾವಿಸುತ್ತಾರೆ

ಸತ್ಯ: ದುರದೃಷ್ಟವಶಾತ್ ಈ ಖಿನ್ನತೆ ಎನ್ನುವುದು ಸಾಮಾನ್ಯವಾದ ದುಃಖದಂತೆ ಸರಳವಾಗಿಲ್ಲ. ಖಿನ್ನತೆಯಿಂದ ಬಳಲುವ ಹೆಚ್ಚಿನ ಜನರು ಇತರ ಮಾನಸಿಕ ಮತ್ತು ಬೈಪೋಲಾರ್ ಡಿಸಾರ್ಡರ್‌ನಂತಹ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಹೊಂದಿರುತ್ತಾರೆ. ಇಂತಹವರು ಅಗತ್ಯ ವೈದ್ಯಕೀಯ ನೆರವು ಪಡೆಯುವುದನ್ನು ಬಿಟ್ಟರೆ ಖಿನ್ನತೆಯಿಂದ ಹೊರಬರಲು ಬೇರೆ ಮಾರ್ಗಗಳಿಲ್ಲ

ಮಿಥ್ಯೆ 4: ಜೀವನದಲ್ಲಿಯ ದುರಂತ ಘಟನೆ ಖಿನ್ನತೆಗೆ ಕಾರಣವಾಗುತ್ತದೆ

ಸತ್ಯ: ಪ್ರೀತಿಪಾತ್ರ ಸಾವು, ಮುದ್ದಿನ ಸಾಕುಪ್ರಾಣಿಯ ಅಗಲಿಕೆ, ಜೀವನೋಪಾಯ ನಷ್ಟ ಇತ್ಯಾದಿಗಳು ಕೆಲವೊಮ್ಮೆ ಖಿನ್ನತೆಯನ್ನುಂಟು ಮಾಡಬಹುದು, ಆದರೆ ಎಲ್ಲ ಸಂದರ್ಭದಲ್ಲಿಯೂ ಇದು ನಿಜವಲ್ಲ. ಜನರು ದಿಢೀರನೆ ಖಿನ್ನತೆಗೆ ಒಳಗಾಗುತ್ತಾರೆ. ಬೈಪೋಲಾರ್ ಡಿಸಾರ್ಡರ್ ಅಥವಾ ದ್ವಿವ್ಯಕ್ತಿತ್ವ ವೈಕಲ್ಯ ಇರುವವರು ಇತರರಿಗಿಂತ ಬಹುಬೇಗನೆ ಖಿನ್ನತೆಗೊಳಗಾಗುತ್ತಾರೆ.

ಮಿಥ್ಯೆ 5: ಪುರುಷರಿಗಿಂತ ಮಹಿಳೆಯರು ಖಿನ್ನತೆಗೆ ಗುರಿಯಾಗುವುದು ಹೆಚ್ಚು

ಸತ್ಯ: ಖಿನ್ನತೆ ಪುರುಷರು ಮತ್ತು ಮಹಿಳೆಯರು ಎಂದು ಭೇದವೆಣಿಸುವುದಿಲ್ಲ, ಆದರೆ ಮಹಿಳೆಯರು ನೆರವಿಗಾಗಿ ಮೊರೆಯಿಡುವ ಹೆಚ್ಚಿನ ಸಾಧ್ಯತೆಯಿರುತ್ತದೆ.ಇದೇ ವೇಳೆ ಪುರುಷರು ತಮಗೆ ನೆರವಿನ ಅಗತ್ಯವಿದೆ ಎಂದು ಇನ್ನೊಬ್ಬರಲ್ಲಿ ಹೇಳಿಕೊಳ್ಳುವುದು ಕಡಿಮೆ. ಹೀಗಾಗಿ ತಮ್ಮ ಭಾವನೆಗಳ ಬಗ್ಗೆ ಮುಕ್ತವಾಗಿ ಮಾತನಾಡುವಂತೆ ಮತ್ತು ನೆರವು ಅಗತ್ಯವಾಗಿದ್ದರೆ ಸಂಕೋಚ ಪಡದೆ ಕೇಳುವಂತೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಕಲಿಸುವುದು ಈ ಸಮಸ್ಯೆಗೆ ಪರಿಹಾರ ನೀಡುತ್ತದೆ ಎನ್ನುತ್ತಾರೆ ತಜ್ಞರು.

ಮಿಥ್ಯೆ 6: ಆತ್ಮಹತ್ಯೆ ಮಾಡಿಕೊಳ್ಳುವವರು ಯಾವಾಗಲೂ ಖಿನ್ನತೆಯಿಂದ ಬಳಲುತ್ತಿರುತ್ತಾರೆ.

ಸತ್ಯ: ಆತ್ಮಹತ್ಯೆ ಮಾಡಿಕೊಳ್ಳುವ ಹೆಚ್ಚಿನ ಜನರು ಖಿನ್ನತೆಗೊಗಾಗಿರುವುದಿಲ್ಲ, ಆದರೆ ವ್ಯವಹಾರದಲ್ಲಿ ಹಾನಿ, ಉದ್ಯೋಗ ನಷ್ಟ, ಮದ್ಯವ್ಯಸನ ಅಥವಾ ಭಗ್ನಪ್ರೇಮದಂತಹ ಕಾರಣಗಳಿಂದ ತಮ್ಮ ಜೀವನದಲ್ಲಿ ಬಿಕ್ಕಟ್ಟಿಗೆ ಸಿಲುಕಿರುತ್ತಾರೆ. ತೀವ್ರವಾದ ಖಿನ್ನತೆಯು ಮಾತ್ರ ವ್ಯಕ್ತಿಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರಗಳನ್ನು ಹುಟ್ಟುಹಾಕುತ್ತವೆ.

ಮಿಥ್ಯೆ 7: ಬಡರಾಷ್ಟ್ರಗಳ ಜನರು ಖಿನ್ನತೆಗೆ ಗುರಿಯಾಗುವುದು ಹೆಚ್ಚು

ಸತ್ಯ: ಅಂಕಿಅಂಶಗಳ ಆಧಾರದಲ್ಲಿ ಹೇಳುವುದಾದರೆ ಶ್ರೀಮಂತ ರಾಷ್ಟ್ರಗಳ ಜನರು ಖಿನ್ನತೆಗೆ ಗುರಿಯಾಗುವುದು ಹೆಚ್ಚು. ವಾಸ್ತವದಲ್ಲಿ ಅಮೆರಿಕ, ಫ್ರಾನ್ಸ್, ರಷ್ಯಾ ಮತ್ತು ಜಪಾನ್‌ಗಳಂತಹ ರಾಷ್ಟ್ರಗಳಲ್ಲಿ ಖಿನ್ನತೆಯ ಪ್ರಮಾಣ ಇತರ ದೇಶಗಳಿಗಿಂತ ಹೆಚ್ಚಿದೆ. ಬಡ ಅಥವಾ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಾಮಾಜಿಕ ಸ್ವರೂಪದಿಂದಾಗಿ ಜನರು ಪರಸ್ಪರ ನಿಕಟರಾಗಿರುತ್ತಾರೆ. ಇದು ಖಿನ್ನತೆಗೆ ಕಾರಣವಾಗುವ ಒಂಟಿತನ ಮತ್ತು ಅತಾರ್ಕಿಕ ಆಲೋಚನೆಗಳನ್ನು ತಡೆಯುತ್ತದೆ.

ಮಿಥ್ಯೆ 8: ಖಿನ್ನತೆಗೆ ಗುರಿಯಾಗುವವರು ಮಾನಸಿಕವಾಗಿ ದುರ್ಬಲರಾಗಿರುತ್ತಾರೆ

ಸತ್ಯ: ಇತಿಹಾಸದ ಪುಟಗಳನ್ನು ಗಮನಿಸಿದರೆ ಬುದ್ಧಿಜೀವಿಗಳು ಈ ಜಗತ್ತಿನ ಕಟು ವಾಸ್ತವತೆಗಳನ್ನು ಅರಿತಿರುವುದರಿಂದ ಖಿನ್ನತೆಗೆ ಗುರಿಯಾಗುವುದು ಹೆಚ್ಚು. ಅಬ್ರಹಾಂ ಲಿಂಕನ್, ಫ್ರಾಂಝ್ ಕಾಫ್ಕಾ ಅವರಂತಹ ಪ್ರಸಿದ್ಧ ವ್ಯಕ್ತಿಗಳು ತಮ್ಮ ಜೀವನವಿಡೀ ಖಿನ್ನತೆಯನ್ನು ಅನುಭವಿಸುತ್ತಲೇ ಬಂದಿದ್ದರು. ಆಧುನಿಕ ಜಗತ್ತಿನಲ್ಲಿಯೂ ಇಂತಹ ನಿದರ್ಶನಗಳು ಬೇಕಾದಷ್ಟಿವೆ.

ಮಿಥ್ಯೆ 9: ಖಿನ್ನತೆಯ ಬಗ್ಗೆ ಮಾತನಾಡುವುದು ಅದನ್ನು ಇನ್ನಷ್ಟು ಹದಗೆಡಿಸುತ್ತದೆ

ಸತ್ಯ: ವಾಸ್ತವದಲ್ಲಿ ತಮ್ಮ ಖಿನ್ನತೆಯ ಬಗ್ಗೆ ಮಾತನಾಡುವವರು ಆ ಸಮಸ್ಯೆಯಿಂದ ಹೊರಬರುವ ಸಾಧ್ಯತೆಯು ಅದರ ಬಗ್ಗೆ ವೌನವಾಗಿರುವವರಿಗಿಂತ ಹೆಚ್ಚಾಗಿರುತ್ತದೆ.

ಮಿಥ್ಯೆ 10: ಹೆತ್ತವರಿಗೆ ಖಿನ್ನತೆಯಿದ್ದರೆ ಅದು ಮಕ್ಕಳಿಗೂ ಬರುತ್ತದೆ

ಖಿನ್ನತೆಗೆ ಗುರಿಯಾದ ಪೋಷಕರ ಮಕ್ಕಳು ತಮ್ಮ ಮುಂದಿನ ಜೀವನದಲ್ಲಿ ಖಿನ್ನತೆಯಿಂದ ಬಳಲುವ ಅವಕಾಶ ಶೇ.10ರಿಂದ 15ರಷ್ಟು ಇದೆಯಾದರೂ, ಹೆಚ್ಚಿನ ಪ್ರಕರಣಗಳಲ್ಲಿ ಬೇರೆಯೇ ಕಾರಣಗಳಿರುತ್ತವೆ. ವ್ಯಕ್ತಿಯು ಖಿನ್ನತೆಗೊಳಗಾಗುವುದು ಆತನ ಸುತ್ತಲಿನ ವಾತಾವರಣವನ್ನು ಅವಲಂಬಿಸಿದೆ. ಇದೇ ಕಾರಣದಿಂದ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಗಾಢ ಸಂಬಂಧ ಹೊಂದಿರುವವರು ಖಿನ್ನತೆಗೆ ಗುರಿಯಾಗುವುದು ತೀರ ಕಡಿಮೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X