ಗಾಯನಕ್ಕೆ ಅಡ್ಡಿಯಾಗದ ಪಾರ್ಶ್ವವಾಯು

ಬೆಂಗಳೂರು, ಜ. 6: ಪಾರ್ಶ್ವವಾಯುವಿಗೆ ತುತ್ತಾದ ಬಹುತೇಕರು ತನ್ನ ಬದುಕಿ ಶಾಶ್ವತವಾಗಿ ನಿಂತಂತೆ ಎಂದು ಭಾವಿಸುತ್ತಾರೆ. ಆದರೆ, ಶೇ.80ರಷ್ಟು ಪಾರ್ಶ್ವವಾಯುವಿಗೆ ತುತ್ತಾದ ಗಾಯಕಿ ಶ್ಯಾಮಲಾ ಜಿ.ಭಾವೆ ತಮ್ಮ ಅಪರೂಪದ ಸಂಗೀತದಿಂದ ಎಲ್ಲರ ಮನಸೂರೆಗೊಂಡಿದ್ದಾರೆ.
ಶ್ಯಾಮಲೆ ಭಾವೆ ಅವರು ಕರ್ನಾಟಕ, ಹಿಂದೂಸ್ಥಾನಿ, ಭಕ್ತಿ, ಸುಗಮ ಸಂಗೀತಗಳನ್ನು ಸುಲಲಿತವಾಗಿ ಹಾಡಬಲ್ಲ ಹಿರಿಯ ಗಾಯಕಿ. ಪಾರ್ಶ್ವವಾಯು ಕಾಡಿದ್ದರೂ ತಮ್ಮ ಸುಶ್ರಾವ್ಯ ಗಾಯನದಿಂದ ಎಲ್ಲರ ಮನಸೂರೆಗೊಂಡಿದ್ದಲ್ಲದೆ, ಪಾರ್ಶ್ವವಾಯುವಿಗೆ ತುತ್ತಾದ ಎಲ್ಲರಿಗೂ ಸ್ಫೂರ್ತಿಯ ಚಿಲುಮೆಯೇ ಆಗಿದ್ದಾರೆ.
ಗಾನ ವಿದುಷಿ ಎಂದು ಖ್ಯಾತಿ ಪಡೆದ ಶ್ಯಾಮಲಾ ಜಿ.ಭಾವೆ, ಸ್ವತಃ ಕಲಾವಿದರಾದ ಆಚಾರ್ಯ ಪಂಡಿತ್ ಗೋವಿಂದ್ ವಿಠಲ್ ಭಾವೆ ಮತ್ತು ವಿದುಷಿ ಲಕ್ಷ್ಮಿಭಾವೆ ಅವರ ಪುತ್ರಿಯಾಗಿದ್ದು ಸಂಗೀತ, ಸಂಸ್ಕೃತಿ ಮತ್ತು ಪರಂಪರೆ ಒಳಗೊಂಡ ಕುಟುಂಬದಲ್ಲಿ ಬೆಳೆದರು.
ತಮ್ಮ ಆರನೇ ವಯಸ್ಸಿನಿಂದಲೂ ಗಾಯನದಲ್ಲಿ ತೊಡಗಿರುವ ಆಕೆಯದು ಸುಮಧುರ ಧ್ವನಿ ಮತ್ತು ಅಪರೂಪದ ಗಾಯಕಿ. ಗ್ವಾಲಿಯರ್ ಘರಾನಾದ ಮುಂಚೂಣಿಯ ಗಾಯಕರಾದ ಅವರು ಸಂಗೀತಪ್ರಿಯರ ಆತ್ಮ ಸ್ಪರ್ಶಿಸುವ ಗಾಯಕರು. ಬೆಂಗಳೂರಿನ ಸಂಗೀತಪ್ರಿಯರಿಗೆ ಅದು ವಿಶೇಷ ಸಂದರ್ಭವಾಗಿದ್ದು ನಗರದ ಬೈರತಿ ಹೌಸ್‌ನಲ್ಲಿ ಇತ್ತೀಚೆಗೆ ತಮ್ಮ ಸಂಗೀತ ಕಾರ್ಯಕ್ರಮ ನೀಡಿ ಗಮನ ಸೆಳೆದರು.







