ಟ್ರ್ಯಾಕ್ಟರ್ ಪಲ್ಟಿ:ಯುವಕ ಮೃತ್ಯು

ಮಂಡ್ಯ, ಜ.7: ಪಾಂಡವಪುರ ತಾಲೂಕಿನ ಬೇಬಿ ಗ್ರಾಮದಲ್ಲಿ ಟ್ರ್ಯ್ರಾಕ್ಟರ್ ಪಲ್ಟಿಯಾಗಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟುದ್ದಾಬೆ, ಗ್ರಾಮದ ಮಹೇಶ್ ಎಂಬುವವರ ಮಗ ಶರತ್(18) ಮೃತಪಟ್ಟ ಯುವಕ.
ಈತ ರವಿವಾರ ಬೆಳಗ್ಗೆ ಬೇಬಿಬೆಟ್ಟದ ಬಳಿಯಿರುವ ತಮ್ಮ ಜಮೀನಿಗೆ ಗೊಬ್ಬರ ಸಾಗಿಸುವಾಗ ಮಾರ್ಗಮಧ್ಯ ಎದರುನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದಾಗ ಪಕ್ಕದ ಕಲ್ಲಿನ ಮೇಲೆ ಹತ್ತಿದ ಇಂಜಿನ್ ಪಲ್ಟಿಯಾಗಿ ಈ ಅಪಘಾತ ಸಂಭವಿಸಿದೆ.
ವಿಷಯ ತಿಳಿದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಗ್ರಾಮಕ್ಕೆ ಭೇಟಿ ನೀಡಿ ಮೃತನ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
Next Story





