ಚೀನಾ: ಮದುವೆ ನೋಂದಣಿಗೆ ಮುಖ ಗುರುತು ತಂತ್ರಜ್ಞಾನ
.jpg)
ಬೀಜಿಂಗ್, ಜ. 7: ಚೀನಾದ ಚಾಂಗ್‌ಕಿಂಗ್ ನಗರವು ಮದುವೆ ನೋಂದಣಿಗಾಗಿ ಮುಖ ಗುರುತಿಸುವ ತಂತ್ರಜ್ಞಾನವನ್ನು ಜಾರಿಗೆ ತಂದಿದೆ.
ಮದುವೆ ವಿಧಿವಿಧಾನಗಳನ್ನು ಸರಳಗೊಳಿಸಲು ಹಾಗೂ ಮದುವೆಗಾಗಿ ಮಾಡುವ ಸಮಯವನ್ನು ಉಳಿಸಲು ಈ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ ಎಂದು ಚಾಂಗ್‌ಕಿಂಗ್ ನಗರದ ಮದುವೆ ನೋಂದಣಿ ಕೇಂದ್ರ ತಿಳಿಸಿದೆ.
ಚೀನಾ ಕಾನೂನಿನ ಪ್ರಕಾರ, ಮದುವೆ ನೋಂದಣಿ ಸಂಸ್ಥೆಗಳು ಮದುವೆ ಪ್ರಮಾಣಪತ್ರ ನೀಡುವ ಮುನ್ನ ಮದುಮಕ್ಕಳ ಗುರುತು ಮತ್ತು ಮನೆ ನೋಂದಣಿ ಪ್ರಮಾಣಪತ್ರಗಳನ್ನು ತಪಾಸಣೆ ಮಾಡಬೇಕಾಗುತ್ತದೆ.
ಪ್ಲಾಸ್ಟಿಕ್ ಸರ್ಜರಿಗೊಳಗಾದವರ ಹಾಗೂ ಅವಳಿಜವಳಿಗಳ ಪ್ರಕರಣಗಳನ್ನೂ ನೂತನ ವ್ಯವಸ್ಥೆ ಸುಲಭವಾಗಿ ನಿಭಾಯಿಸುತ್ತದೆ. ಮೊದಲಿನ ವ್ಯವಸ್ಥೆಗಳಲ್ಲಿ ಇದು ಕಷ್ಟವಾಗಿತ್ತು.
Next Story





