ಭಾರತದಲ್ಲಿ ಆಟೋ ಸೇವೆಯನ್ನು ಪುನರಾರಂಭಿಸಲಿರುವ ಉಬರ್

ಹೊಸದಿಲ್ಲಿ,ಜ.8: ಪ್ರಮುಖ ಕ್ಯಾಬ್ ಸೇವಾ ಸಂಸ್ಥೆ ಅಮೆರಿಕದ ಉಬರ್ ಈ ತಿಂಗಳ ಉತ್ತರಾರ್ಧದಲ್ಲಿ ಭಾರತದಲ್ಲಿ ತನ್ನ ಆಟೋ ಸೇವೆಯನ್ನು ಪುನರಾರಂಭಿಸಲಿದೆ. ತನ್ನದೇ ದೇಶದ ಓಲಾದಿಂದ ತೀವ್ರ ಪೈಪೋಟಿಯನ್ನು ಎದುರಿಸುತ್ತಿರುವ ಉಬರ್ ಭಾರತದಲ್ಲಿ ತನ್ನ ಆಟೋ ಸೇವೆಯನ್ನು 2016, ಮಾರ್ಚ್‌ನಲ್ಲಿ ಸ್ಥಗಿತಗೊಳಿಸಿತ್ತು. ಮೊದಲ ಹಂತದಲ್ಲಿ ಬೆಂಗಳೂರು ಮತ್ತು ಪುಣೆಗಳಲ್ಲಿ ಈ ಸೇವೆಗೆ ಮತ್ತೆ ಚಾಲನೆ ನೀಡಲಿರುವ ಉಬರ್ ತನ್ನ ಆ್ಯಪ್‌ನಲ್ಲಿ ‘ಆಟೋ’ ಆಪ್ಷನ್ ಮೂಲಕ ಬಾಡಿಗೆ ಆಟೋಗಳನ್ನು ಬುಕ್ ಮಾಡಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಿದೆ.
2014ರಲ್ಲಿ ಬೆಂಗಳೂರು ಮತ್ತು ಚೆನ್ನೈಗಳಲ್ಲಿ ತನ್ನ ಆಟೋ ಸೇವೆಯನ್ನು ಆರಂಭಿಸಿದ್ದ ಓಲಾ ಪ್ರಸ್ತುತ ಭಾರತದ 73 ನಗರಗಳಲ್ಲಿ ಈ ಸೇವೆಯನ್ನು ಒದಗಿಸುತ್ತಿದ್ದು, 1.2 ಲಕ್ಷಕ್ಕೂ ಅಧಿಕ ಆಟೋರಿಕ್ಷಾಗಳೊಂದಿಗೆ ಸಹಭಾಗಿತ್ವ ಹೊಂದಿದೆ.
ಈ ಹಿಂದೆ ಉಬರ್ ದಿಲ್ಲಿ, ಕೊಯಮತ್ತೂರು, ಇಂದೋರ ಮತ್ತು ಭುವನೇಶ್ವರಗಳಲ್ಲಿ ಆಟೋ ಸೇವೆಯನ್ನು ಒದಗಿಸುತ್ತಿತ್ತು.
Next Story