ಧೋನಿ ದಾಖಲೆ ಮುರಿದ ಸಹಾ

ಕೇಪ್‌ಟೌನ್, ಜ.8: ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಭುವನೇಶ್ವರ ಕುಮಾರ್ ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕದ ಮೊರ್ನೆ ಮೊರ್ಕೆಲ್ ನೀಡಿದ ಕ್ಯಾಚ್ ಪಡೆದ ವೃದ್ಧಿಮಾನ್ ಸಹಾ ಮಾಜಿ ನಾಯಕ ಎಂ.ಎಸ್. ಧೋನಿ ದಾಖಲೆ ಮುರಿದರು.
ಸಹಾ ಪಂದ್ಯದಲ್ಲಿ 10ನೇ ಕ್ಯಾಚ್ ಪಡೆದರು. ಈ ಮೂಲಕ 2014ರ ಡಿಸೆಂಬರ್‌ನಲ್ಲಿ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಧೋನಿ ನಿರ್ಮಿಸಿದ ದಾಖಲೆ(9 ಔಟ್) ಮುರಿದರು. ಸಹಾ ಎಲ್ಲ ಆಟಗಾರರನ್ನು ಕ್ಯಾಚ್ ಮೂಲಕ ಔಟ್ ಮಾಡಿದ್ದರೆ, ಧೋನಿ 8 ಕ್ಯಾಚ್, 1 ಸ್ಟಂಪಿಂಗ್ ಮಾಡಿದ್ದರು. ಧೋನಿಗಿಂತ ಮೊದಲು 1996ರಲ್ಲ್ಲಿ ನಯನ್ ಮೊಂಗಿಯಾ ಡರ್ಬನ್‌ನಲ್ಲಿ ದ. ಆಫ್ರಿಕದ ವಿರುದ್ಧ 8 ಕ್ಯಾಚ್‌ಗಳನ್ನು ಪಡೆದಿದ್ದರು.
ಟೆಸ್ಟ್ ಇತಿಹಾಸದಲ್ಲಿ ಸಹಾ ವಿಕೆಟ್‌ಕೀಪಿಂಗ್ನಲ್ಲಿ ಎರಡನೇ ಜಂಟಿ ಶ್ರೇಷ್ಠ ನಿರ್ವಹಣೆ ತೋರಿದ್ದಾರೆ. ಇಂಗ್ಲೆಂಡ್‌ನ ಬಾಬ್ ಟೇಲರ್ 1980ರಲ್ಲಿ ಮುಂಬೈನಲ್ಲಿ ಭಾರತ ವಿರುದ್ಧ, ಆಸ್ಟ್ರೇಲಿಯದ ಆ್ಯಡಮ್ ಗಿಲ್‌ಕ್ರಿಸ್ಟ್ 2000ರಲ್ಲಿ ಹ್ಯಾಮಿಲ್ಟನ್‌ನಲ್ಲಿ ನ್ಯೂಝಿಲೆಂಡ್‌ನ ವಿರುದ್ಧ 10 ಆಟಗಾರರನ್ನು ಔಟ್ ಮಾಡಿದ್ದರು. ಇಂಗ್ಲೆಂಡ್‌ನ ಜಾಕ್ ರಸ್ಸಲ್(ದ.ಆಫ್ರಿಕ ವಿರುದ್ಧ 1995) ಹಾಗೂ ದಕ್ಷಿಣ ಆಫ್ರಿಕದ ಎಬಿ ಡಿವಿಲಿಯರ್ಸ್(ಪಾಕ್ ವಿರುದ್ಧ 2013) ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಕ್ಯಾಚ್‌ಗಳನ್ನು (11)ಪಡೆದು ವಿಕೆಟ್‌ಕೀಪಿಂಗ್‌ನಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.
2010ರಲ್ಲಿ ದಕ್ಷಿಣ ಆಫ್ರಿಕ ವಿರುದ್ದ ಚೊಚ್ಚಲ ಪಂದ್ಯ ಆಡಿದ್ದ ಸಹಾ 32 ಟೆಸ್ಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 85 ವಿಕೆಟ್ ಬಲಿ ಪಡೆದಿದ್ದರು.
ಪ್ರಸ್ತುತ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಎಲ್ಗರ್, ಅಮ್ಲ, ಪ್ಲೆಸಿಸ್, ಕ್ವಿಂಟನ್ ಡಿಕಾಕ್ ಹಾಗೂ ರಬಾಡ ಕ್ಯಾಚ್ ಪಡೆದಿದ್ದ ಸಹಾ ಎರಡನೇ ಇನಿಂಗ್ಸ್‌ನಲ್ಲಿ ಎಲ್ಗರ್, ಡಿಕಾಕ್, ಡುಪ್ಲೆಸಿಸ್, ಕೇಶವ್ ಮಹಾರಾಜ್ ಹಾಗೂ ಮೊರ್ಕೆಲ್ ನೀಡಿದ್ದ ಕ್ಯಾಚ್ ಪಡೆದಿದ್ದರು.







