ಶಬರಿಮಲೆ: ಆನೆಗಳ ದಾಳಿಗೆ ಸಿಲುಕಿ ಅಯ್ಯಪ್ಪ ವ್ರತಧಾರಿ ಮೃತ್ಯು

ತಿರುವನಂತಪುರ, ಜ. 7: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿದ್ದ 30 ವರ್ಷದ ಅಯ್ಯಪ್ಪ ವೃತಧಾರಿ ಮೇಲೆ ಸೋಮವಾರ ಮುಂಜಾನೆ ಆನೆಗಳು ದಾಳಿ ನಡೆಸಿ ಕೊಂದು ಹಾಕಿದೆ.
ಆನೆ ದಾಳಿಗೆ ಒಳಗಾಗಿ ಮೃತಪಟ್ಟ ವ್ಯಕ್ತಿಯನ್ನು ಚೆನ್ನೈ ನಿವಾಸಿ ಆರ್. ನಿತೇಶ್ ಕುಮಾರ್ ಎಂದು ಗುರುತಿಸಲಾಗಿದೆ.
ಸೋಮವಾರ ಬೆಳಗ್ಗೆ 1.30ರ ಹೊತ್ತಿಗೆ ಕಾಡು ದಾರಿಯಲ್ಲಿ ಸಾಗುತ್ತಿದ್ದಾಗ ಕುಮಾರ್ ಮೇಲೆ ಆನೆ ದಾಳಿ ನಡೆಸಿತು. ಅಯ್ಯಪ್ಪ ದೇವಸ್ಥಾನಕ್ಕೆ ತಲುಪಲು ಎರುಮಲೆಯಿಂದ ಪಂಪಾದತ್ತ ತೆರಳುತ್ತಿದ್ದ ಅಯ್ಯಪ್ಪ ವ್ರತಧಾರಿಗಳ ಗುಂಪಿನಲ್ಲಿ ಕುಮಾರ್ ಒಬ್ಬರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕರಿಮಲೆಯಲ್ಲಿ ಆನೆ ದಾಳಿ ನಡೆಸುವಾಗ ಕುಮಾರ್ ಗುಂಪಿನೊಂದಿಗೆ ಇರಲಿಲ್ಲ. ಇತರರು ಹತ್ತಿರ ಅಂಗಡಿಗಳಿಗೆ ಖರೀದಿಗೆ ತೆರಳಿದ್ದರು. ಆನೆಯೊಂದು ಅವರನ್ನು ಸೊಂಡಿಲಿನಲ್ಲಿ ಎತ್ತಿ ಎಸೆಯಿತು. ಗಂಭೀರ ಗಾಯಗೊಂಡ ಅವರನ್ನು ಪಂಪಾದಲ್ಲಿರುವ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
Next Story





