Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಜನ ವಿರೋಧಿ ಸಿಡಿಪಿ-2031: ಅರವಿಂದ...

ಜನ ವಿರೋಧಿ ಸಿಡಿಪಿ-2031: ಅರವಿಂದ ಲಿಂಬಾವಳಿ

ವಾರ್ತಾಭಾರತಿವಾರ್ತಾಭಾರತಿ8 Jan 2018 8:30 PM IST
share

ಬೆಂಗಳೂರು, ಜ.5: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಗರದ ಜನತೆಗಾಗಿ ಜಾರಿ ಮಾಡಲು ಉದ್ದೇಶಿಸಿರುವ ಪರಿಷ್ಕೃತ ಮಹಾಯೋಜನೆ-2031(ಸಿಡಿಪಿ) ಸಂಪೂರ್ಣವಾಗಿ ಅವೈಜ್ಞಾನಿಕ ಮತ್ತು ಜನ ವಿರೋಧಿಯಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಆರೋಪಿಸಿದರು.

ಸೋಮವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2014ರ ನ.22ರಂದು ಬಿಡಿಎ ಪರಿಷ್ಕೃತ ಮಹಾಯೋಜನೆಗೆ ತಾತ್ಕಾಲಿಕ ಅನುಮೋದನೆ ನೀಡಿರುವುದು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಇದು ಹಣಗಳಿಕೆಯ ಉದ್ದೇಶವೇ ಹೊರತು, ಇದರಲ್ಲಿ ಯಾವುದೆ ರೀತಿಯ ಜನಪರ ಕಾಳಜಿ ಇಲ್ಲ ಎಂದು ದೂರಿದರು.

ಪರಿಸರ ಸಂರಕ್ಷಣೆ, ಉತ್ತಮ ಸಂಚಾರ ವ್ಯವಸ್ಥೆ, ಎಲ್ಲ ಜನರ ಅಭಿವೃದ್ಧಿ ಮತ್ತು ಸುಧಾರಿತ ಆಡಳಿತದ ನೆಪದಲ್ಲಿ ಪರಿಷ್ಕೃತ ಮಹಾಯೋಜನೆ ಅನುಷ್ಠಾನವು ಕೇವಲ ರೈತರ ಜಮೀನು ಕಬಳಿಸುವ ಹುನ್ನಾರವಾಗಿದ್ದು, ಬಿಲ್ಡರ್ಸ್‌ಗಳು ಹಾಗೂ ರಿಯಲ್ ಎಸ್ಟೇಟ್ ಏಜೆಂಟ್‌ಗಳಿಗೆ ಅನುಕೂಲ ಮಾಡುವ ಉದ್ದೇಶ ಇದರಲ್ಲಿ ಅಡಗಿದೆ ಎಂದು ಲಿಂಬಾವಳಿ ಆರೋಪಿಸಿದರು.

ಬಿಡಿಎ ಒಟ್ಟು 1006.97 ಚ.ಕೀ ವ್ಯಾಪ್ತಿಯಲ್ಲಿ ಮೂರು ವಲಯಗಳನ್ನು ಮಾಡಿರುವುದು ದೊಡ್ಡ ಗೋಲ್‌ಮಾಲ್‌ಗೆ ಕಾರಣವಾಗಲಿದೆ. ‘ವಲಯ-ಎ’ನಲ್ಲಿ ನಗರದ ಕೇಂದ್ರ ಭಾಗದಿಂದ ಹೊರ ವರ್ತುಲ ರಸ್ತೆಯ ಒಳಭಾಗದಲ್ಲಿನ ಪ್ರದೇಶವನ್ನು ‘ವಲಯ-ಎ’ ಎಂದು ವರ್ಗೀಕರಿಸಿದೆ ಎಂದು ಅವರು ಹೇಳಿದರು.
ಹೊರವರ್ತುಲ ರಸ್ತೆ ಹೊರಭಾಗದಿಂದ ನಗರೀಕರಣ ಎಲ್ಲೆ ಒಳಗಿನ ಪ್ರದೇಶವನ್ನು ವಲಯ-ಬಿ ಎಂದು ವರ್ಗೀಕರಿಸಲಾಗಿದೆ. ಉತ್ತಮ ಮೂಲಭೂತ ಸೌಕರ್ಯ, ಸಾರಿಗೆ ವ್ಯವಸ್ಥೆ ಮತ್ತು ಅಭಿವೃದ್ಧಿ ವೇಗವನ್ನು ಹೆಚ್ಚಿಸಲಾಗುವುದೆಂದು ಬಿಡಿಎ ಹೇಳುತ್ತಿದೆ ಎಂದು ಅವರು ಹೇಳಿದರು.

ನಗರೀಕರಣ ಎಲ್ಲೆಯ ಹೊರಭಾಗದಿಂದ ಸ್ಥಳೀಯ ಯೋಜನಾ ಪ್ರದೇಶದ ಎಲ್ಲೆವರೆಗಿನ ಪ್ರದೇಶವನ್ನು ವಲಯ-ಸಿ ಎಂದು ಗುರುತಿಸಲಾಗಿದೆ. ಈ ವಲಯದಲ್ಲಿ ಉತ್ಪಾದಕ ವ್ಯವಸಾಯ ಮತ್ತು ಉತ್ತಮ ನೈಸರ್ಗಿಕ ಪರಿಸರವನ್ನು ಸೃಷ್ಟಿಸುವುದು ಮೂಲ ಗುರಿ ಎಂದು ಬಿಡಿಎ ಹೇಳಿಕೊಂಡಿದೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.

ಇದರಿಂದಾಗಿ, ಬಿಡಿಎ ವ್ಯಾಪ್ತಿಯಲ್ಲಿ ಕೃಷಿ ವಲಯ ಗಣನೀಯ ಪ್ರಮಾಣದಲ್ಲಿ ಕುಸಿತವಾಗಲಿದೆ. ಖಾಸಗಿ ಜಮೀನಿನ ಮೇಲೆ ಮನಸೋ ಇಚ್ಛೆ ಪಬ್ಲಿಕ್ ಮತ್ತು ಸೆಮಿ ಪಬ್ಲಿಕ್ ಪಾರ್ಕ್ ಎಂದು ತೋರಿಸಿರುವುದು ಯಾವ ಕಾರಣಕ್ಕಾಗಿ? ಉದಾಹರಣೆಗೆ ಬನ್ನೇರುಘಟ್ಟ ರಸ್ತೆಯಲ್ಲಿ ಕೃಷಿ ಮತ್ತು ಅರಣ್ಯ ಜಮೀನು ಹೆಚಾಗಿದ್ದು ಅದರ ಮಧ್ಯಭಾಗದಲ್ಲೆ ಪ್ರಭಾವಿ ವ್ಯಕ್ತಿಗಳು ವಾಣಿಜ್ಯ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ ಎಂದು ಅವರು ದೂರಿದರು.
ಬಿಡಿಎ, ಬಿಬಿಎಂಪಿ ಅನೇಕ ಕಡೆಗಳಲ್ಲಿ ರಸ್ತೆ, ಅಂಡರ್‌ಪಾಸ್ ನಿರ್ಮಾಣ ಮಾಡಿವೆ. ನಗರ ಬೆಳವಣಿಗೆ ಹಿನ್ನೆಲೆಯಲ್ಲಿ ಕಾರಿಡಾರ್‌ಗಳು, ಮೇಲುಸೇತುವೆಗಳ ನಿರ್ಮಾಣಕ್ಕೆ ಯಾವುದೆ ಸ್ಪಷ್ಟ ಗುರಿ ಇಲ್ಲವಾಗಿದೆ. ಬಿಡಿಎ ರೂಪಿಸಿರುವ ಪರಿಷ್ಕೃತ ಮಹಾಯೋಜನೆಯಲ್ಲಿ ಬೇಕಾಬಿಟ್ಟಿಯಾಗಿ ರಸ್ತೆ ಮಾರ್ಗಗಳನ್ನು ತೋರಿಸಲಾಗಿದೆ. ಪ್ರಸ್ತುತ ಈ ರಸ್ತೆಗಳಲ್ಲಿ ಸಾರ್ವಜನಿಕರ ಕಟ್ಟಡಗಳಿವೆ ಎಂದು ಅವರು ಹೇಳಿದರು.

ಕೆರೆ ಆಸುಪಾಸು ಪ್ರದೇಶಗಳಲ್ಲಿ ಕೃಷಿ ಸಂಬಂಧಿತ ಚಟುವಟಿಕೆಗಳು ನಡೆಯಲಿವೆ. ಅಂತಹ ಪ್ರದೇಶಗಳನ್ನೆ ಪಾರ್ಕ್ ರೆನ್ ಮತ್ತು ಓಪನ್ ಸ್ಪೇಸ್ ಎಂದು ಬಿಡಿಎ ತೋರಿಸಿದೆ. ಹಳದಿ ವಲಯ, ಬಫರ್, ಜಲ ಮೂಲ(ವಾಟರ್ ಬಾಡಿ), ಎನ್‌ಜಿಟಿ ಇತ್ಯಾದಿಗಳಿಂದ ಹಣ ಮಾಡುವ ದಂಧೆಗೆ ಇಳಿದಿದೆ ಎಂದು ಅವರು ಆರೋಪಿಸಿದರು.

ಕಸದ ಬಗ್ಗೆ ಸ್ಪಷ್ಟ ಯೋಜನೆ ಇಲ್ಲ. ಎಂಪಿಸಿ ಸಭೆ ನಡೆಯದೆ ನಗರಾಭಿವೃದ್ಧಿ ಸಚಿವರ ಮೂಗಿನಡಿ ಎಲ್ಲ ಚಟುವಟಿಕೆ ನಡೆಸಲಾಗುತ್ತಿದೆ. ಸಾರ್ವಜನಿಕರು ದೂರು ದಾಖಲಿಸಲು ಕೇಂದ್ರ ಕಚೇರಿಯಲ್ಲಿ ಅವಕಾಶ ನೀಡದೆ, ಬನಶಂಕರಿ ಬಿಡಿಎ ಕಚೇರಿಯಲ್ಲಿ ದೂರು ಸ್ವೀಕಾರ ಕೇಂದ್ರ ಸ್ಥಾಪಿಸಲಾಗಿದೆ. ಜನರಿಂದ ದೂರುಗಳು ಬರದಂತೆ ಮಾಡಲು ಬಿಡಿಎ ರೂಪಿಸಿದ ಕುತಂತ್ರವಿದು. ಆದರೂ, 1700ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ. ಆನ್‌ಲೈನ್‌ನಲ್ಲಿ 800 ದೂರುಗಳು ದಾಖಲಿಸಲ್ಪಟ್ಟಿವೆ ಎಂದು ಅವರು ಹೇಳಿದರು.

2031-ಅಭಿವೃದ್ಧಿ ಸಿಡಿಪಿಯನ್ನು ಸಮಗ್ರವಾಗಿ ಪುನರ್ ಪರಿಶೀಲಿಸಬೇಕು. ಇಲ್ಲದಿದ್ದರೆ, 2018ರಲ್ಲಿ ಅಸ್ತಿತ್ವಕ್ಕೆ ಬರಲಿರುವ ಬಿಜೆಪಿ ಸರಕಾರವು ಹೊಸದಾಗಿ ಸಿಡಿಪಿ 2031ನ್ನು ರೂಪಿಸಲಿದೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥ್ ನಾರಾಯಣ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X