ಜ. 9ರಿಂದ ಮೇಲಂಗಡಿಯಲ್ಲಿ ಧಾರ್ಮಿಕ ಕಾರ್ಯಕ್ರಮ
ಮಂಗಳೂರು, ಜ.8: ಉಳ್ಳಾಲ ಮೇಲಂಗಡಿಯ ಎಸ್‌ವೈಎಸ್ ಮತ್ತು ಎಸೆಸ್ಸೆಫ್ ವತಿಯಿಂದ ಜ.9ರಿಂದ 16ರವರೆಗೆ ಮೇಲಂಗಡಿಯ ಬಿಸ್ಮಿಲ್ಲಾ ಕಾಂಪೌಂಡ್‌ನ ತಾಜುಲ್ ಉಲಮಾ ವೇದಿಕೆಯಲ್ಲಿ ಉಳ್ಳಾಲ ಖಾಝಿ ಅಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರ ದುಆ ಆಶೀರ್ವಚನ ದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಜ. 9ರಂದು ಮದನಿ ಮಾಲೆ ಮತ್ತು ತಾಜುಲ್ ಉಲಮಾ ಮೌಲಿದ್, ಜ.10ರಂದು ನಸೀಹತ್ ಸಿಲ್‌ಸಿಲಾ, ಜ.11ರಂದು ಬುರ್ದಾ ಮಜ್ಲಿಸ್, ಜ.12ರಂದು ನಸೀಹತ್ ಸಿಲ್‌ಸಿಲಾ, ಜ.13ರಂದು ಮುಹಿಯ್ಯುದ್ದೀನ್ ಮಾಲೆ ಆಲಾಪನೆ, ಜ.14 ಮತ್ತು 15ರಂದು ನಸೀಹತ್ ಸಿಲ್‌ಸಿಲಾ, ಜ.16ರಂದು ಜಲಾಲಿಯ್ಯ ರಾತೀಬು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





