ಜ. 9: ಚುನಾವಣಾ ಅಧ್ಯಯನ ಶಿಬಿರ
ಮಂಗಳೂರು, ಜ.8: ಎಸ್ಕೆಎಸೆಸ್ಸೆಫ್ ಜಿಲ್ಲಾ, ವಲಯ, ಕ್ಲಸ್ಟರ್‌ಗಳಿಗೆ ನಡೆಯುವ ಸಾಂಘಿಕ ಚುನಾವಣಾ ಅಧ್ಯಯನ ಶಿಬಿರವು ಜ. 9ರಂದು ಬೆಳಗ್ಗೆ 10:30ಕ್ಕೆ ಬಂಟ್ವಾಳ ಶಾಖಾ ಕಚೇರಿಯಲ್ಲಿ ನಡೆಯಲಿದೆ.
ಜಿಲ್ಲಾಧ್ಯಕ್ಷ ಇಸಾಕ್ ಫೈಝಿ ಅಧ್ಯಕ್ಷತೆ ವಹಿಸಲಿದ್ದು, ಸದಸ್ಯತ್ವ ಅಭಿಯಾನದ ಅಧ್ಯಕ್ಷ ಸೈಯದ್ ಅಮೀರ್ ತಂಙಳ್ ಕಿನ್ಯ ಶಿಬಿರ ಉದ್ಘಾಟಿಸಲಿದ್ದಾರೆ.
ಸದಸ್ಯತ್ವ ಅಭಿಯಾನದ ಪ್ರಧಾನ ಸಂಚಾಲಕ ಅಬ್ದುಲ್ ರಶೀದ್ ವೆಳ್ಳಾಯಿಕೋಡ್ ವಿಷಯ ಮಂಡಿಸಲಿದ್ದಾರೆ ಎಂದು ಸದಸ್ಯತ್ವ ಅಭಿಯಾನದ ಜಿಲ್ಲಾ ಪ್ರಧಾನ ಸಂಚಾಲಕ ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





