ಯಮನ್ನಲ್ಲಿ ಸೌದಿ ಯುದ್ಧ ವಿಮಾನ ಪತನ: ಪೈಲಟ್ಗಳು ಸುರಕ್ಷಿತ
ರಿಯಾದ್, ಜ. 8: ಯಮನ್ನಲ್ಲಿ ರವಿವಾರ ಪತನಗೊಂಡ ತನ್ನ ಯುದ್ಧ ವಿಮಾನವೊಂದರ ಪೈಲಟ್ಗಳನ್ನು ರಕ್ಷಿಸಲಾಗಿದೆ ಎಂದು ಸೌದಿ ಅರೇಬಿಯದ ರಾಯಲ್ ವಾಯುಪಡೆ ಹೇಳಿದೆ.
‘ತಾಂತ್ರಿಕ ವೈಫಲ್ಯ’ದಿಂದಾಗಿ ವಿಮಾನ ಪತನಗೊಂಡಿದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ಆದರೆ, ಬ್ರಿಟನ್ ನಿರ್ಮಿತ ‘ಟೊರ್ನಾಡೊ’ ಯುದ್ಧ ವಿಮಾನ ಯಮನ್ ವಾಯುಪ್ರದೇಶದ ಸಾಡ ರಾಜ್ಯದಲ್ಲಿ ಹಾರಾಡುತ್ತಿದ್ದಾಗ ಅದನ್ನು ಹೊಡೆದುರುಳಿಸಲಾಗಿದೆ ಎಂದು ಯಮನ್ನ ಬಂಡುಕೋರರು ನಡೆಸುತ್ತಿರುವ ‘ಅಲ್-ಮಸೀರಾ’ ಟಿವಿ ಹೇಳಿದೆ. ಆದಾಗ್ಯೂ, ವಿಮಾನವು ಸೌದಿ ಭೂಪ್ರದೇಶದಲ್ಲಿ ಪತನಗೊಂಡಿತು ಎಂದು ಹೌದಿ ಬಂಡುಕೋರರು ಹೇಳಿದ್ದಾರೆ.
ಅಪಘಾತದಲ್ಲಿ ಪೈಲಟ್ಗಳು ಗಾಯಗೊಂಡಿಲ್ಲ ಹಾಗೂ ಭೂಸೇನೆ ಮತ್ತು ವಾಯು ಸೇನೆ ಅವರನ್ನು ಸೌದಿ ಅರೇಬಿಯಕ್ಕೆ ಕರೆತಂದವು ಎಂದು ಯಮನ್ನಲ್ಲಿ ಹೌದಿ ಬಂಡುಕೋರರ ವಿರುದ್ಧ ಯುದ್ಧ ನಡೆಸುತ್ತಿರುವ ಸೌದಿ ಅರೇಬಿಯ ನೇತೃತ್ವದ ಮಿತ್ರ ಪಡೆ ಹೇಳಿದೆ.
Next Story