ವಿಮಾನದಲ್ಲಿ ಜಗಳ ಮಾಡಿದ ಇಬ್ಬರು ಪೈಲಟ್‌ಗಳ ಅಮಾನತು
.jpg)
ಹೊಸದಿಲ್ಲಿ, ಜ. 9: ಜನವರಿ 1ರಂದು ಲಂಡನ್-ಮುಂಬೈ ನಡುವಿನ ವಿಮಾನ ಹಾರಾಟದ ಸಂದರ್ಭ ಜಗಳ ಮಾಡಿದ ಇಬ್ಬರು ಪೈಲೆಟ್‌ಗಳನ್ನು ಜೆಟ್ ಏರ್‌ವೇಸ್ ಅಮಾನತುಗೊಳಿಸಿದೆ.ವಿಮಾನ ಹಾರಾಟದ ಸಂದರ್ಭ ಹಿರಿಯ ಪುರುಷ ಕಮಾಂಡರ್ ಓರ್ವರು ಮಹಿಳಾ ಕಮಾಂಡರ್‌ರ ಕೆನ್ನೆಗೆ ಹೊಡೆದಿದ್ದರು. ಈ ಹಿನ್ನೆಲೆಯಲ್ಲಿ ವಿಮಾನದಿಂದ ಇಬ್ಬರನ್ನೂ ಕೆಳಗೆ ಇಳಿಸಲಾಗಿತ್ತು.
ಜನವರಿ 1ರಂದು ಲಂಡನ್-ಮುಂಬೈ ವಿಮಾನ 9ಡಬ್ಲು119ರಲ್ಲಿ ನಡೆದ ಈ ಘಟನೆ ಹಿನ್ನೆಲೆಯಲ್ಲಿ ತತ್‌ಕ್ಷಣ ಜಾರಿಗೆ ಬರುವಂತೆ ಕಾಕ್‌ಪಿಟ್‌ನ ಇಬ್ಬರೂ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಜೆಟ್ ಏರ್‌ವೇಸ್ ವಕ್ತಾರರ ಹೇಳಿಕೆ ತಿಳಿಸಿದೆ.
ಪುರುಷ ಪೈಲಟ್‌ನ ಹಾರಾಟ ಪರವಾನಿಗೆಯನ್ನು ವಿಮಾನ ನಿರ್ವಹಿಸುವ ಡಿಜಿಸಿಎ ಈಗಾಗಲೇ ರದ್ದುಪಡಿಸಿದೆ.
ಘಟನೆ ಬಗ್ಗೆ ಕಳೆದ ವಾರ ಜೆಟ್ ಏರ್‌ವೇಸ್ ವಕ್ತಾರರು, ಕಾಕ್‌ಪಿಟ್‌ನ ಇಬ್ಬರು ಸಿಬ್ಬಂದಿ ನಡುವಿನ ತಪ್ಪು ತಿಳುವಳಿಕೆ ಈ ಘಟನೆಗೆ ಕಾರಣ. ಇದನ್ನು ಕೂಡಲೇ ಸರ್ವಸಮ್ಮತವಾಗಿ ಪರಿಹರಿಸಲಾಗುವುದು ಎಂದಿದ್ದರು.
Next Story