ಜ.13ರಿಂದ ಕಟಪಾಡಿಯಲ್ಲಿ ತುಳು ನಾಟಕೋತ್ಸವ
ಕಟಪಾಡಿ, ಜ.9: ಪ್ರೇರಣಾ ಟ್ರಸ್ಟ್ ಕಟಪಾಡಿ ಇದರ ಆಶ್ರಯದಲ್ಲಿ ರೋಟರಿ ಕಟಪಾಡಿ, ಯುವವಾಹಿನಿ ಕಟಪಾಡಿ, ಎಸ್‌ವಿಎಸ್ ಪ್ರೌಢಶಾಲೆ ಕಟಪಾಡಿ ಇವರ ಸಹಯೋಗದೊಂದಿಗೆ ಮೂರು ದಿನಗಳ ‘ತುಳು ನಾಟಕೋತ್ಸವ’ ಜ.13ರಿಂದ 15ರವರೆಗೆ ಕಟಪಾಡಿಯಲ್ಲಿ ನಡೆಯಲಿದೆ.
‘ರಂಜನೋತ್ಸವ-2018’ ಹೆಸರಿನ ಈ ನಾಟಕೋತ್ಸವದಲ್ಲಿ 13ರಂದು ಸುಮನಸಾ ಕೊಡವೂರು ಅಭಿನಯದ ಕೋಟಿ ಚೆನ್ನಯ, 14ರಂದು ಕರಾವಳಿ ಕಲಾವಿದರು ಅಭಿನಯದ ಬಗ್ಗನ ಭಾಗ್ಯೋ, 15ರಂದು ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ಅಭಿನಯದ ಚಂದ್ರ ಎನ್ನೊಟ್ಟುಲ್ಲೆ ನಾಟಕಗಳು ಪ್ರದರ್ಶಿತ ವಾಗಲಿವೆ.
ಉಚಿತ ಪ್ರವೇಶವಿರುವ ಈ ನಾಟಕೋತ್ಸವಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರ್ಝೋತ್ಸಾಹಿಸಬೇಕೆಂದು ಪ್ರೇರಣಾ ಟ್ರಸ್ಟ್‌ನ ನಿರ್ದೇಶಕ ರಾಘವೇಂದ್ರ ರಾವ್ ಕಟಪಾಡಿ, ಕೃಷ್ಣಕುಮಾರ್ ರಾವ್ ಮಟ್ಟು, ಕಟಪಾಡಿ ಶಂಕರಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





