ಮಂಗಳೂರು ಸ್ಪೋರ್ಟ್ಸ್ ಕ್ಲಬ್‌ಗೆ ಕೆಎಸ್‌ಸಿಎ ಟ್ರೋಫಿ

ಮಂಗಳೂರು, ಜ.9: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ದೇರಳಕಟ್ಟೆಯ ಫಾದರ್ ಮುಲ್ಲರ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 16 ವರ್ಷ ಕೆಳಗಿನ ವಯೋಮಾನದವರ ಅಂತರ್ ಕ್ಲಬ್ ಲೀಗ್ ಕಂ ನಾಕೌಟ್ ಪಂದ್ಯಾಟದ ಅಂತಿಮ ಪಂದ್ಯದಲ್ಲಿ ಮಂಗಳೂರು ಸ್ಪೋರ್ಟ್ಸ್ ಕ್ಲಬ್ (ಎಂಎಸ್‌ಸಿ) ತಂಡವು ಮಂಗಳೂರು ಅಕೇಶನಲ್ಸ್ ತಂಡವನ್ನು 7 ವಿಕೆಟ್ ಗಳ ಅಂತರದಿಂದ ಪರಾಜಯಗೊಳಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಅಕೇಶನಲ್ಸ್ ತಂಡ ಮೊದಲು ಬ್ಯಾಟಿಂಗ್ ನಡೆಸಿತು. ಎಂಎಸ್‌ಸಿ ತಂಡದ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿದ ಅಕೇಶನಲ್ಸ್ ತಂಡ 21 ರನ್‌ಗಳಿಗೆ ಆರಂಭಿಕ 4 ವಿಕೆಟ್ ಕಳೆದುಕೊಂಡಿತು. ನಂತರ ಸೈಫ್ (38) ಮತ್ತು ಆಶೀಷ್ ಸುವರ್ಣ (42)ರ ಬ್ಯಾಟಿಂಗ್ ನೆರವಿನಿಂದ 39.2 ಓವರುಗಳಲ್ಲಿ 129 ಮೊತ್ತಕ್ಕೆ ಆಲೌಟಾಯಿತು. ಎಂಎಸ್‌ಸಿಯ ಶೇನ್26ಕ್ಕೆ 2 ವಿಕೆಟ್ ಪಡೆದರು.
ಎಂಎಸ್‌ಸಿ ತಂಡ ರನ್‌ಗಳಿಸುವ ಮೊದಲೇ ಹಿಂದಿನ ಪಂದ್ಯದಲ್ಲಿ ತ್ರಿಶತಕ ದಾಖಲಿಸಿದ್ದ ಅಝಾನ್ ವಿಕೆಟ್ ಕಳೆದುಕೊಂಡರೂ, ಮ್ಯಾಕ್ನಿಲ್‌ರ ಅಜೇಯ 83 ರನ್‌ಗಳ ಸಹಾಯದಿಂದ 25ನೆಯ ಓವರಿನಲ್ಲಿ 3 ವಿಕೆಟ್‌ಗಳಿಗೆ ವಿಜಯಿ ರನ್ ಗಳಿಸಿತು.





