ಜಾರಿಗೆಬೈಲ್: ಮದ್ರಸ ಸಮ್ಮೇಳನಕ್ಕೆ ಚಾಲನೆ

ಬೆಳ್ತಂಗಡಿ, ಜ. 9: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿಯ ನಿರ್ದೇಶನದಂತೆ 8,864 ಮದ್ರಸ ಕೇಂದ್ರಗಳಲ್ಲಿ ಜ.10 ರಿಂದ ಫೆಬ್ರವರಿ 15 ರ ತನಕ ನಡೆಯಲಿರುವ ಮದ್ರಸ ಸಮ್ಮೇಳನ ಕಾರ್ಯಕ್ರಮದ ಭಾಗವಾಗಿ 'ಧ್ವಜ ದಿನ' ಆಚರಣೆಯನ್ನು ಬದ್ರಿಯಾ ಜುಮಾ ಮಸೀದಿ ಅಧೀನದಲ್ಲಿರುವ ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ ವಠಾರದಲ್ಲಿ ಧ್ವಜಾರೋಹಣ ಹಾಗೂ ಸಭಾ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಖತೀಬ್ ಅಬ್ದುರಹ್ಮಾನ್ ಬಾಖವಿ ಉಸ್ತಾದ್ ದುಆ ಆಶೀರ್ವಚನ ಮಾಡಿದರು. ಸ್ವಾಗತ ಸಮಿತಿಯ ಚೇರ್ಮ್ಯಾನ್ ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಮುಖ್ಯೋಪಾಧ್ಯಾಯರಾದ ಎನ್.ಎಂ ಶರೀಫ್ ಸಖಾಫಿ ನೆಕ್ಕಿಲ್ ಪ್ರಾಸ್ತಾವಿಕ ಮಾತುಗಳ ಮೂಲಕ ನೆರೆದ ಗಣ್ಯರಿಗೆ ಸ್ವಾಗತ ಕೋರಿದರು.
ವೇದಿಕೆಯಲ್ಲಿ ಜಮಾಅತ್ ಕೋಶಾಧಿಕಾರಿ ಹಮೀದ್ ಮೆಸ್ಕಾಂ, ಸ್ವಾಗತ ಸಮಿತಿ ಕೋಶಾಧಿಕಾರಿ ಪುತ್ತು ಮೋನು ಕುಕ್ಕುಡಿ, ರಝಾಕ್ ಸಅದಿ ಹಾಗೂ ಊರಿನ ಗಣ್ಯ ನೇತಾರು, ಜಮಾತ್ ಸಮಿತಿ ಪ್ರತಿನಿಧಿಗಳು , ಮುತಅಲ್ಲಿಮರು, ವಿದ್ಯಾರ್ಥಿಗಳು ಹಾಗೂ ರಕ್ಷಕರು ಉಪಸ್ಥಿತರಿದ್ದರು.
ರಝಾಕ್ ಸಅದಿ ಕಾರ್ಯಕ್ರಮ ನಿರೂಪಿಸಿದರು.





