ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸನ್ಮಾನ

ಉಡುಪಿ, ಜ.9: ಉಡುಪಿ ಸಿಎಸ್‌ಐ ಜುಬಿಲಿ ದೇವಾಲಯದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜ. 9ರಂದು ಉಡುಪಿಯಲ್ಲಿ ಸನ್ಮಾನಿಸ ಲಾಯಿತು.
ಈ ಸಂದರ್ಭದಲ್ಲಿ ಸಿಎಸ್‌ಐ ಬಾಯ್ಸ ಬೋರ್ಡಿಂಗ್ ಹೋಮ್‌ಗೆ ಸಂಬಂಧಿಸಿದ ಮನವಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ದೇವಾಲಯ ಸಭಾ ಪಾಲಕ, ಉಡುಪಿ ವಲಯಾಧ್ಯಕ್ಷ ವಂ.ಸ್ಟೀವನ್ ಸರ್ವೋತ್ತಮ, ಸಿಎಸ್‌ಐ ಬಾಯ್ಸಿ ಬೋರ್ಡಿಂಗ್ ಹೋಮ್‌ನ ವಾರ್ಡನ್ ಕ್ಲೇರಿಬೆಲ್ ಅಂಬ್ಲರ್, ಕ್ರೈಸ್ತ ಅಭಿವೃದ್ಧಿ ಸಮಿತಿಯ ಸದಸ್ಯ ಪ್ರಶಾಂತ್ ಜತ್ತನ್ನ, ಭಾರತೀಯ ಕ್ರೈಸ್ತ ಒಕ್ಕೂಟದ ಜಿಲ್ಲಾಧ್ಯಕ್ಷ ಚಾರ್ಲ್ಸ್ ಅಂಬ್ಲರ್, ಉಡುಪಿ ಯೂತ್ ಮಿನಿಸ್ಟ್ರೀಯ ಸಂಸ್ಥಾಪಕ ಗ್ಲಾಡ್‌ಸನ್ ಕರ್ಕಡ ಉಪಸ್ಥಿತರಿದ್ದರು.
Next Story





