ಇಂತಹ ಆಡಳಿತವನ್ನು ಎಂದೂ ನೋಡಿಲ್ಲ: ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್

ಬೆಂಗಳೂರು, ಜ.9: ಸರಕಾರಿ ಅಧಿಕಾರಿಯೊಬ್ಬರಿಗೆ ಯಾವುದೇ ಹುದ್ದೆಗೆ ನಿಯೋಜಿಸದೆ ವರ್ಗಾವಣೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಇಲಾಖೆಯೊಂದಕ್ಕೆ ವರ್ಗಾವಣೆ ಮಾಡಿ ಯಾವುದೆ ಹುದ್ದೆಯನ್ನು ನೀಡಿಲ್ಲ ಎಂದು ಶಿವಾಜಿ ಎ.ಕಾವಲೆ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ನ್ಯಾಯಪೀಠ, ಇಂತಹ ಆಡಳಿತವನ್ನು ತಾವು ಎಂದೂ ನೋಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಪ್ರತಿ ಗಂಟೆ, ಪ್ರತಿ ದಿನ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಸರಿಯಲ್ಲ. ಇದರಿಂದ, ಆಡಳಿತ ಯಂತ್ರ ಕುಸಿಯುತ್ತದೆ. ಅಲ್ಲದೆ, ವಿಧಾನ ಸೌಧದಲ್ಲಿ ಸಿಬ್ಬಂದಿಗಳನ್ನು ಹಾಗೂ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಕುಳಿತಿದ್ದಾರೆಯೇ ಎಂದು ಮೌಖಿಕ ಅಭಿಪ್ರಾಯಪಟ್ಟ ನ್ಯಾಯಪೀಠವು ಶಿವಾಜಿ ಎಂ. ಕಾವಲೆ ಅವರನ್ನು ಜ.12ರ ಒಳಗೆ ಹುದ್ದೆಗೆ ನಿಯೋಜಿಸಬೇಕೆಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿತು.
Next Story





