3 ಕಾರ್ಮಿಕರ ಸಾವು ಪ್ರಕರಣ: ಅಸೋಸಿಯೇಶನ್‌ನ 8 ಜನರ ಬಂಧನ
ಬೆಂಗಳೂರು, ಜ.9: ವಸತಿ ಸಮುಚ್ಚಯದ ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಸ್ವಚ್ಛಗೊಳಿಸಲು ಇಳಿದಿದ್ದ ಮೂವರು ಕಾರ್ಮಿಕರು ವಿಷಾನೀಲ ಸೇವಿಸಿ ಉಸಿರುಗಟ್ಟಿ ಮೃತಪಟ್ಟಿದ್ದ ಪ್ರಕರಣ ಸಂಬಂಧ ಎನ್‌ಡಿ ಸೆಲ್ ಅಸೋಸಿಯೇಶನ್‌ನ 8 ಪದಾಧಿಕಾರಿಗಳನ್ನು ನಗರದ ಬಂಡೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೋಮಸಂದ್ರ ಪಾಳ್ಯದ ಪ್ರದೀಪ್ ದಾಸನ್(44), ರ್ನಾಂಡಿಸ್(41), ಎಸ್.ನರಸಿಂಹ ಪ್ರಸಾದ್(37), ಟಿ.ಆರ್.ಪರಮೇಶ್ವರ್(68), ಮಹೇಂದ್ರ ಶ್ರೀವಾಸ್ತವ್(41), ನಿತಿನ್ ಕೆ.(40), ಸತ್ಯಜಿತ್ ರಾವತ್(41), ಹೃಷಿಕೇಶ್ ನಂಬಿಯಾರ್(35) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರು ಎನ್‌ಡಿ ಸೆಲ್ ಅಸೋಸಿಯೇಶನ್‌ನ ಪದಾಧಿಕಾರಿಗಳಾಗಿದ್ದು, ಸೋಮಸಂದ್ರಪಾಳ್ಯದಲ್ಲಿರುವ ಎನ್‌ಡಿ ಸೆಲ್ ಅಪಾರ್ಟ್‌ಮೆಂಟ್ ನಿರ್ವಹಣೆ ಮಾಡುತ್ತಿದ್ದರು ಎನ್ನಲಾಗಿದೆ.
Next Story





