ಬುದ್ಧನ ಪ್ರತಿಮೆ ಕಳವು: ಪ್ರತಿಭಟನೆ
ಮುಝಾಫರ್‌ನಗರ್, ಜ. 9: ಮುಝಾಫರ್ ಜಿಲ್ಲೆಯ ಗ್ರಾಮವೊಂದರಲ್ಲಿ ಗೌತಮ ಬುದ್ಧನ ವಿಗ್ರಹ ಕಳವುಗೈದಿದ್ದು, ದಲಿತರು ಪ್ರತಿಭಟನೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಯಾನಾ ಮಾಜ್ರಾ ಗ್ರಾಮದಲ್ಲಿ ಸೋಮವಾರ ಗೌತಮ ಬುದ್ಧನ ವಿಗ್ರಹ ಕಳವುಗೈಯಲಾಗಿದೆ ಎಂದು ಚಾಥ್ವಾಲಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಜಿ.ಸಿ. ಶರ್ಮಾ ಹೇಳಿದ್ದಾರೆ.
ಈ ಸುದ್ದಿ ಹರಡುತ್ತಿದ್ದಂತೆ ಆಕ್ರೋಶಿತರಾದ ದಲಿತರು ಪಶ್ಚಿಮ ಉತ್ತರಪ್ರದೇಶ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದರು.ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಆರಂಬಿಸಿದ್ದಾರೆ.
Next Story