ನಾಲ್ವರು ಅಂತರಾಜ್ಯ ಕಳ್ಳಿಯರ ಬಂಧನ
ಮೈಸೂರು,ಜ.9: ದೇವರಾಜ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಅಂತಾರಾಜ್ಯ ಕಳ್ಳಿಯರನ್ನು ಬಂಧಿಸಿದ್ದಾರೆ.
ಜ.7. ರಂದು ಪ್ರಭಾ ಚಿತ್ರಮಂದಿರ ಸಮೀಪದ ಮನ್ನಾರ್ಸ್ ಸೀರೆ ಮಳಿಗೆಯಲ್ಲಿ ಸೀರೆ ಖರೀದಿ ಮಾಡುವ ನೆಪದಲ್ಲಿ ಗ್ರಾಹಕರೋರ್ವರ 40 ಸಾವಿರ ರೂ. ನಗದು ಇದ್ದ ಪರ್ಸ್ ಕಸಿದು ಪರಾರಿಯಾಗಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ದೇವರಾಜ ಠಾಣೆ ಪೊಲೀಸರು, ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ತಮಿಳುನಾಡು ಸೇಲಂ ಮೂಲದ ಸುಮತಿ, ಪ್ರಿಯಾ,ಅರಾಯಿ, ಲಕ್ಷ್ಮೀ ಎಂಬವರನ್ನು ಇಂದು ಟೌನ್ ಹಾಲ್ ಸಮೀಪ ಬಂಧಿಸಿದ್ದಾರೆ.
Next Story