ಜ.11ರಿಂದ ಕ್ಯಾಂಪಸ್ ಯಾತ್ರೆ: ಪತಾಕೆ ನೀಡಿ ಉದ್ಘಾಟನೆ

ಮಂಗಳೂರು, ಜ. 9: ಎಸ್.ಕೆ.ಎಸ್.ಎಸ್.ಎಫ್ ಕ್ಯಾಂಪಸ್ ವಿಂಗ್ ಕೇಂದ್ರ ಸಮಿತಿ ವತಿಯಿಂದ ಜ.11 ರಿಂದ 19ರವರೆಗೆ ನಡೆಯಲಿರುವ ಕ್ಯಾಂಪಸ್ ಯಾತ್ರೆಯ ಭಾಗವಾಗಿ ಸಮಸ್ತ ಕೇರಳ ಜಂಇಯತುಲ್ ಉಲಮಾದ ಅಧ್ಯಕ್ಷ ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್ ಪತಾಕೆಯನ್ನು ಕ್ಯಾಂಪಸ್ ವಿಂಗ್ ಪದಾಧಿಕಾರಿಗಳಿಗೆ ನೀಡಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕ್ಯಾಂಪಸ್ ವಿಂಗ್ ಕೇಂದ್ರ ಸಮಿತಿಯ ಕೊ-ಆರ್ಡಿನೇಟರ್ ಶಬಿನ್ ಮುಹಮ್ಮದ್, ಅಧ್ಯಕ್ಷ ಇಸ್ಹಾಕ್ ತ್ರಿಶ್ಶುರ್, ಉಪಾಧ್ಯಕ್ಷ ಬದ್ರುದ್ದೀನ್ ಕುಕ್ಕಾಜೆ, ದ.ಕ ಜಿಲ್ಲಾ ಕನ್ವಿನರ್ ಜೌಹರ್ ಕುಕ್ಕಾಜೆ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
Next Story





