ಎಸ್ ಬಿಐ ತನ್ನ ಉದ್ಯೋಗಿಗಳಿಗೆ ಹಾಕಿರುವ ಈ ಹೊಸ ನಿರ್ಬಂಧ ತಮಾಷೆಯಾಗಿದೆ
ಬಂದೇ ಬಿಟ್ಟರೆ ಮಾಡುವುದೇನು?

ಹೊಸದಿಲ್ಲಿ, ಜ.10: ಬ್ಯಾಂಕ್ ಸಾಮಾನ್ಯವಾಗಿ ತನ್ನ ಉದ್ಯೋಗಿಗಳಿಗೆ ಒಳ್ಳೆಯ ಉಡುಪು, ಪಾಲಿಷ್ ಮಾಡಿದ ಶೂ ಧರಿಸುವಂತೆ ಹಾಗು ಗ್ರಾಹಕರೊಂದಿಗೆ ಅತ್ಯುತ್ತಮ ರೀತಿಯಲ್ಲಿ ವ್ಯವಹರಿಸುವಂತೆ ಸೂಚಿಸುತ್ತದೆ. ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ನಿರ್ಬಂಧವೊಂದು ಉದ್ಯೋಗಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕೆಲಸದ ವೇಳೆ ಹಾಗು ಪ್ರಮುಖವಾಗಿ ಮೀಟಿಂಗ್ ಗಳ ಸಂದರ್ಭ ತೇಗು ಬಿಡದಂತೆ ಎಸ್ ಬಿಐ ತನ್ನ 2,68,705 ಸಿಬ್ಬಂದಿಗೆ ಸೂಚನೆ ನೀಡಿದೆ. ತೇಗು ಬಿಡುವುದು ‘ಹೆಚ್ಚು ಕಿರಿಕಿರಿ’ಯುಂಟು ಮಾಡುತ್ತದೆ ಎಂದು ಅದು ಹೇಳಿದೆ.
ಸಾಮಾನ್ಯವಾಗಿ ಆಹಾರ ಸೇವನೆಯ ನಂತರ ಪಚನಕ್ರಿಯೆಗೆ ಅನುಗುಣವಾಗಿ ಎಲ್ಲರೂ ತೇಗು ಬಿಡುತ್ತಾರೆ. ಇಂದಿನ ದಿನಗಳ ಆಹಾರ ಪದ್ಧತಿಯಿಂದ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತೇಗು ಸಾಮಾನ್ಯವಾಗಿ ಬಿಟ್ಟಿದೆ. ಇಂತಹ ಸಂದರ್ಭದಲ್ಲಿ ಗ್ರಾಹರೊಡನೆ ವ್ಯವಹರಿಸುತ್ತಿರುವಾಗ, ಸಭೆಗಳಲ್ಲಿರುವಾಗ ತೇಗು ಬಿಡಬಾರದೆಂಬ ನಿರ್ಬಂಧ ಎಸ್ ಬಿಐ ಉದ್ಯೋಗಿಗಳಿಗೆ ತಲೆನೋವಾಗಿ ಪರಿಣಮಿಸಿದೆ,
ಇದಷ್ಟೇ ಅಲ್ಲದೆ ದೇಶಾದ್ಯಂತ ಎಸ್ ಬಿಐನ 13 ಸಾವಿರ ಶಾಖೆಗಳನ್ನು, 36 ದೇಶಗಳಲ್ಲಿ 190 ಕಚೇರಿಗಳನ್ನು ವಿಸ್ತರಿಸುವಂತೆ ಸೂಚನೆ ನೀಡಿದೆ.