ಮೂಡಿಗೆರೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಸಂಘಪರಿವಾರ, ಬಿಜೆಪಿ ಕಾರಣ: ಎಸ್‌ಡಿಪಿಐ

ಚಿಕ್ಕಮಗಳೂರು, ಜ.10: ಇತ್ತೀಚೆಗೆ ಮೂಡಿಗೆರೆ ಪಟ್ಟಣದಲ್ಲಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳಲು ಸಂಘಪರಿವಾರ ಹಾಗೂ ಬಿಜೆಪಿ ನೇರ ಕಾರಣ ಎಂದು ಎಸ್‌ಡಿಪಿಐ ಮೂಡಿಗೆರೆ ಕಾರ್ಯದರ್ಶಿ ಮಹಮ್ಮದ್ ಶರೀಫ್ ಆರೋಪಿಸಿದ್ದಾರೆ.
ಅವರು ಧನ್ಯಶ್ರೀ ಆತ್ಮಹತ್ಯೆ ಕುರಿತಂತೆ ಸೂಕ್ತ ತನಿಖೆ ನಡೆಸುವಂತೆ ಪಕ್ಷದ ವತಿಯಿಂದ ತಹಶೀಲ್ದಾರಿಗೆ ಮನವಿ ಸಲ್ಲಿಸಿ ಮಾತಾನಾಡಿದರು. ಸಹೋದರಿ ಧನ್ಯಶ್ರೀ ಅನ್ಯ ಸಮುದಾಯವನ್ನು ಸಮರ್ಥನೆ ಮಾಡಿದ ಕಾರಣ್ಕೆ ಕೆರಳಿದ ಸಂಘಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರು ಧನ್ಯಳಿಗೆ ಫೋನ್‌ನಲ್ಲಿ ಬೆದರಿಕೆ ಹಾಕಿ, ಚಾಟ್‌ಗಳನ್ನು ಬೇರೆ ಗ್ರೂಪ್ ಗಳಿಗೆ ಶೇರ್ ಮಾಡಿದ್ದಾರೆ. ಕೆಲವು ಸಂಘಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರು ಮನೆಗೆ ಹೋಗಿ ತಂದೆ-ತಾಯಿ ಸಹಿತ ಧನ್ಯಶ್ರೀ ಯನ್ನು ಬೆದರಿಸಿದ್ದಾರೆ. ಇದರಿಂದ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಘಪರಿವಾರ ಹಾಗೂ ಬಿಜೆಪಿಯ ಅನೈತಿಕ ಪೋಲಿಸ್ ಗಿರಿಗೆ ಅಮಾಯಕ ಬಾಲಕಿ ಬಲಿಯಾಗಿರುವುದು ಖೇದಕರ. ಈ ನಿಟ್ಟನಲ್ಲಿ ಪೊಲೀಸ್ ಇಲಾಖೆ ಈಗಾಗಲೇ ಒಬ್ಬನನ್ನು ಬಂಧಿಸಿದ್ದು, ಭಜರಂಗದಳದ ಸಂಚಾಲಕ ಅವಿನಾಶ್ ತಪ್ಪಿಸಿಕೊಂಡಿದ್ದಾನೆ ಈತನ ಮೇಲೆ ಇತ್ತಿಚೀಗೆ ಮುಸಲ್ಮಾನರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಕೇಸ್ ಕೂಡ ದಾಖಲಾಗಿದ್ದು, ಇತನನ್ನು ಹಾಗೂ ಇನ್ನುಳಿದವರನ್ನು ಕೂಡಲೆ ಬಂಧಿಸಬೇಕು ಎಂದು ಶರೀಫ್ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭ ಎಸ್‌ಡಿಪಿಐ ಮೂಡಿಗೆರೆ ವಿಧಾನ ಸಭಾಧ್ಯಕ್ಷ ಮುಹಮ್ಮದ್ ರಫೀಕ್, ಕಾರ್ಯದರ್ಶಿ ಶರೀಫ್ ಎಂ.ಯೂ, ರಿಝ್ವಾನ್ ಹುಸೈನ್, ನದೀಂ, ಅಕ್ರಮ್, ತೌಸೀಫ್, ಮೂಸ ಹಸೈನಾರ್, ಇಮ್ರಾನ್ ಮತ್ತಿತರರಿದ್ದರು.





