ಪುತ್ರಿಯ ವಿವಾಹ ಕರೆಯೋಲೆಯಲ್ಲಿ ರಾಜ್ಯ ಸರಕಾರದ ಲಾಂಛನ ಮುದ್ರಿಸಿದ ಬಿಜೆಪಿ ಶಾಸಕ!

ಹರಿದ್ವಾರ, ಜ. 10: ರಾಜ್ಯ ಸರಕಾರದ ಲಾಂಛನ ಮುದ್ರಿಸಿದ ಹಿನ್ನೆಲೆಯಲ್ಲಿ ಉತ್ತರಾಖಂಡದ ಬಿಜೆಪಿ ಶಾಸಕ ಸುರೇಶ್ ರಾಥೋಡ್ ಅವರ ಪುತ್ರಿ ವಿವಾಹದ ಕರೆಯೋಲೆ ವಿವಾದಕ್ಕೆ ಕಾರಣವಾಗಿದೆ.
ಆದಾಗ್ಯೂ, ರಾಥೋಡ್ ತಾನು ರಾಜ್ಯ ಸರಕಾರದ ಒಂದು ಭಾಗ ಹಾಗೂ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುವ ಮೂಲಕ ವಿವಾಹ ಕರೆಯೋಲೆಯಲ್ಲಿ ರಾಜ್ಯ ಸರಕಾರದ ಲಾಂಛನ ಮುದ್ರಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
“ನನ್ನ ಪುತ್ರಿಯೊಂದಿಗೆ ಬಡ ಯುವತಿಯ ವಿವಾಹವನ್ನೂ ಮಾಡುತ್ತಿದ್ದೇನೆ. ಜನರಿಗೆ ಇದು ಕಾಣುವುದಿಲ್ಲ ಯಾಕೆ ? ನಾನು ಸರಕಾರದ ಒಂದು ಭಾಗ. ಆದುದರಿಂದ ವಿವಾಹ ಕರೆಯೋಲೆಯಲ್ಲಿ ಲಾಂಛನ ಬಳಸಿದೆ. ಇದು ಅಪರಾಧವಲ್ಲ. ಹಲವು ಜನರು ಹೀಗೆ ಮಾಡಿರುವುದನ್ನು ನಾನು ನೋಡಿದ್ದೇನೆ” ಎಂದು ಅವರು ಹೇಳಿದ್ದಾರೆ. ರಾಥೋಡ್ ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಜವಾಲ್ಪುರ ವಿಧಾನ ಸಭಾ ಕ್ಷೇತ್ರದ ಶಾಸಕ.
Next Story