ಪರಿಸರ ಕಾರ್ಯಕರ್ತೆ ಮೈತ್ರಿ ಶ್ರೀನಾಗೇಶ್ ನಿಧನ

ಬೆಂಗಳೂರು, ಜ.10: ಅನಾರೋಗ್ಯಕ್ಕೆ ತುತ್ತಾಗಿದ್ದ ಪರಿಸರ ಕಾರ್ಯಕರ್ತೆ ಮೈತ್ರಿ ಶ್ರೀನಾಗೇಶ್(28) ಇಂದು ನಗರದ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿದ್ದ ‘ಯಕೃತ್ತಿನ’ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮೈತ್ರಿ, ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಇವರು ಹಿರಿಯ ಪರಿಸರವಾದಿ ಉಲ್ಲಾಸ ಕಾರಂತ್‌ರವರ ವೈಲ್ಡ್‌ಲೈಫ್ ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.
ಮೈತ್ರಿರವರು ಚಾರಣ, ವನ್ಯಜೀವಿ ಸಂರಕ್ಷಣೆ, ಸಾಕು ಪ್ರಾಣಿ ಮತ್ತು ಪಕ್ಷಿಗಳ ಬಗ್ಗೆ ಕಿರಿಯರಲ್ಲಿ ಮತ್ತು ಯುವಕರಲ್ಲಿ ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದರು. ಪರಿಸರ ಕುರಿತು ಪತ್ರಿಕೆಗಳಿಗೆ ಹಲವು ಲೇಖನಗಳು ಬರೆದಿದ್ದಾರೆ.
Next Story





