ಬ್ರಿಟನ್ ಸಚಿವ ಸಂಪುಟಕ್ಕೆ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ

ಲಂಡನ್, ಜ. 10: ಬ್ರಿಟನ್ ಪ್ರಧಾನಿ ತೆರೇಸಾ ಮೇ ಮಂಗಳವಾರ ಸಂಪುಟಕ್ಕೆ ಭಾರತ ಮೂಲದ ಮೂವರು ಸಚಿವರನ್ನು ಸೇರಿಸಿಕೊಂಡಿದ್ದಾರೆ.
ಇನ್ಫೋಸಿಸ್ ಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅಳಿಯ ರಿಶಿ ಸುನಾಕ್, ಸುಯೇಲಾ ಫೆರ್ನಾಂಡಿಸ್ ಮತ್ತು ಶೈಲೇಶ್ ವರ ಹೊಸದಾಗಿ ಸೇರ್ಪಡೆಗೊಂಡವರು. ಮಿನಿಸ್ಟರ್ ಆಫ್ ಸ್ಟೇಟ್ ಅಲೋಕ್ ಶರ್ಮ ಈಗಾಗಲೇ ಸಂಪುಟದಲ್ಲಿದ್ದಾರೆ.
ಇದರೊಂದಿಗೆ ಬ್ರಿಟನ್ ಸಂಪುಟದಲ್ಲಿ ಭಾರತ ಮೂಲದ ಸಚಿವರ ಸಂಖ್ಯೆ 4ಕ್ಕೇರಿದೆ. ಇದು ಬ್ರಿಟನ್ ಇತಿಹಾಸದಲ್ಲೇ ದಾಖಲೆಯಾಗಿದೆ.
Next Story





