ಉಡುಪಿ: ಜಿಲ್ಲಾ ಮಟ್ಟದ ಕಾಲೇಜು ರಂಗೋತ್ಸವ ಸ್ಪರ್ಧೆಗೆ ಅರ್ಜಿ ಆಹ್ವಾನ
ಉಡುಪಿ, ಜ.10: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಮೈಸೂರು ಇವರ ವತಿಯಿಂದ ಕಾಲೇಜು ವಿದ್ಯಾರ್ಥಿಗಳಲ್ಲಿ ಸೃಜನಶೀಲ ನೆಲೆಯಲ್ಲಿ ರಂಗಕಲೆ ಹಾಗೂ ಜನಪದ ನೃತ್ಯ ಪ್ರದರ್ಶನ ನೀಡಲು ಕಾಲೇಜು ರಂಗೋತ್ಸವ ವನ್ನು ಏಪರ್ಡಿಸಲಾಗಿದೆ.
ಜಿಲ್ಲೆಯಿಂದ 6 ಕಾಲೇಜುಗಳಿಗೆ ಮಾತ್ರ ಅವಕಾಶವಿದ್ದು, ಆಸಕ್ತ ಕಾಲೇಜು ತಂಡ ಒಂದು ನಾಟಕ ಹಾಗೂ ಒಂದು ಜನಪದ ನೃತ್ಯ ಪ್ರದರ್ಶಿಸಲು ಸ್ಪರ್ಧೆ ಯನ್ನು ಜನವರಿ ಕೊನೆ ವಾರದಲ್ಲಿ ಉಡುಪಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ.
ಭಾಗವಹಿಸುವ ಪ್ರತಿ ನಾಟಕ (ಅವಧಿ 60ರಿಂದ 90 ನಿಮಿಷ) ತಂಡದ ಪ್ರದರ್ಶನಾ ಸಿದ್ಧತೆಗೆ ರೂ.15,000 ಹಾಗೂ ಪ್ರತಿ ಜನಪದ ನೃತ್ಯ (ಕನಿಷ್ಟ 10 ನಿಮಿಷದಿಂದ 20 ನಿಮಿಷ) ತಂಡಕ್ಕೆ 6,000 ನಿಗದಿಪಡಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ನಾಟಕಕ್ಕೆ ಪ್ರಥಮ ರೂ.10,000, ದ್ವಿತೀಯ ರೂ.5,000 ಹಾಗೂ ಜನಪದ ನೃತ್ಯಕ್ಕೆ ಪ್ರಥಮ ರೂ.8,000 ಹಾಗೂ ದ್ವಿತೀಯ ರೂ.5,000 ಬಹುಮಾನ ನೀಡಲಾಗುವುದು.
ಜಿಲ್ಲಾ ಮಟ್ಟದ ವಿಜೇತರಿಗೆ, ವಲಯ ಮಟ್ಟದಲ್ಲಿ ಹಾಗೂ ವಲಯ ಮಟ್ಟದ ವಿಜೇತರಿಗೆ ರಾಜ್ಯಮಟ್ಟದಲ್ಲಿ ಸ್ಪರ್ಧಿಸಲು ಅವಕಾಶವಿದೆ. ಆಸಕ್ತ ಕಾಲೇಜು ತಂಡಗಳು (ತಂಡದಲ್ಲಿ ಕನಿಷ್ಟ 10ರಿಂದ ಗರಿಷ್ಟ 20 ಮಂದಿ ಮಾತ್ರ) ಕಾಲೇಜು ರಂಗೋತ್ಸವದ ಜಿಲ್ಲಾ ಸಂಚಾಲಕರಾದ ಸಂತೋಷ್ ನಾಯಕ್ ಪಟ್ಲ (ದೂರವಾಣಿ:996406915) ಇವರಲ್ಲಿ ತಮ್ಮ ಹೆಸರನ್ನು ನೊಂದಾಯಿಸಿ ಕೊಳ್ಳಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ. ದೇವದಾಸ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





