ಚಾಲಿಪೋಲಿಲು ಚಿತ್ರ ಪ್ರದರ್ಶನ ಉದ್ಘಾಟನೆ

ಮಂಗಳೂರು, ಜ.10: ಸಿನಿಪೊಲಿಸ್ ಸಿನಿಮಾ ಮಂದಿರದಲ್ಲಿ ನಡೆಯುತ್ತಿರುವ ತುಳು ಚಲನಚಿತ್ರೋತ್ಸವದಲ್ಲಿ ಜಯಕಿರಣ ಫಿಲಂಸ್ ಲಾಂಛನದಲ್ಲಿ ತಯಾರಾದ ‘ಚಾಲಿಪೋಲಿಲು’ ಚಿತ್ರ ಪ್ರದರ್ಶನವನ್ನು ಸಿನಿಮಾ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಮಂಗಳವಾರ ಉದ್ಘಾಟಿಸಿದರು.
ಈ ಸಂದರ್ಭ ದೇವದಾಸ್ ಕಾಫಿಕಾಡ್, ಲಯನ್ ಕಿಶೋರ್ ಡಿ. ಶೆಟ್ಟಿ, ಪ್ರಕಾಶ್ ಪಾಂಡೇಶ್ವರ್, ಗಿರೀಶ್ ಶೆಟ್ಟಿ, ಉದಯ ಪೂಜಾರಿ, ಕಿಶೋರ್ ಕೊಟ್ಟಾರಿ, ರಾಜೇಶ್ ಬ್ರಹ್ಮಾವರ್, ಸಚಿನ್ ಎಎಸ್ ಉಪ್ಪಿನಂಗಡಿ, ಗಂಗಾಧರ ಶೆಟ್ಟಿ, ಸಾಯಿಕೃಷ್ಣ, ರಘು ಶೆಟ್ಟಿ, ಸ್ವರ್ಣ ಸುಂದರ್, ಸುನಿಲ್ ನೆಲ್ಲಿಗುಡ್ಡೆ, ಸೂರಜ್, ತಮ್ಮ ಲಕ್ಷ್ಮಣ ಉಪಸ್ಥಿತರಿದ್ದರು.
Next Story





