ದ.ಕ.ಜಿಲ್ಲೆಯಲ್ಲಿ ಅಹಿತಕರ ಘಟನೆ: ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ

ಮಂಗಳೂರು, ಜ.10:ದ.ಕ.ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು, ಕೃತ್ಯದ ಹಿಂದಿರುಗಿರುವ ಶಕ್ತಿಗಳು ಯಾರು ಮತ್ತು ಯಾತಕ್ಕಾಗಿ ಈ ಕೃತ್ಯ ಮಾಡಲಾಗುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಸಿ ಶಾಂತಿ ನೆಲೆಸಲು ಮುಂದಾಗಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ನಿಯೋಗವು ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಕಮಿಟಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಮಸೂದ್ ನೇತೃತ್ವದ ನಿಯೋಗದಲ್ಲಿ ಕಮಿಟಿಯ ಪದಾಧಿಕಾರಿಗಳಾದ ಕೆ. ಅಶ್ರಫ್, ಹಾಜಿ ಮುಹಮ್ಮದ್ ಹನೀಫ್, ಅಹ್ಮದ್ ಬಾವಾ, ನೂರುದ್ದೀನ್ ಸಾಲ್ಮರ, ಹಮೀದ್ ಕುದ್ರೋಳಿ, ಹಾಜಿ ರಿಯಾಝುದ್ದೀನ್, ಸಿ.ಎಂ.ಮುಸ್ತಫಾ, ಸಿ.ಎಂ.ಹನೀಫ್, ಎನ್.ಕೆ. ಅಬೂಬಕರ್, ಹಾಜಿ ಬಿ.ಅಬೂಬಕರ್, ಮೊಯ್ದಿನ್ ಮೋನು ಮತ್ತಿತರಿದ್ದರು.
Next Story





