ಯುವತಿಯನ್ನು ಹಿಂಬಾಲಿಸಿದ ಪ್ರಕರಣ: ವಿಕಾಸ್ ಬರಾಲಾಗೆ ಜಾಮೀನು

ಚಂಢೀಗಡ, ಜ.11: ಯುವತಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ, ಹರ್ಯಾಣ ಬಿಜೆಪಿ ಅಧ್ಯಕ್ಷ ಸುಭಾಷ್ ಬರಾಲರ ಪುತ್ರ ವಿಕಾಸ್ ಬರಾಲಾಗೆ ಪಂಜಾಬ್ ಹಾಗು ಹರ್ಯಾಣ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ.
ವಿಕಾಸ್ ಬರಾಲಾ ಹಾಗು ಆತನ ಸ್ನೇಹಿತ ಆಶಿಷ್ ಕುಮಾರ್ ನ ಕರೆಯ ವಿವರಗಳ ಬಗ್ಗೆ ಮಾಹಿತಿ ನೀಡಲು ಈ ಮೊದಲು ಕೋರ್ಟ್ ಚಂಢೀಗಡ ಪೊಲೀಸರಿಗೆ ಆದೇಶಿಸಿತ್ತು.
ಹಿರಿಯ ಐಎಎಸ್ ಅಧಿಕಾರಿಯ ಪುತ್ರಿ ವರ್ಣಿಕಾ ಕುಂಡು ಅವರನ್ನು ಹಿಂಬಾಲಿಸಿದ ಹಾಗು ಅಪಹರಣಕ್ಕೆ ಯತ್ನಿಸಿದ ಆರೋಪದಲ್ಲಿ ವಿಕಾಸ್ ಬರಾಲ ವಿರುದ್ಧ ಪ್ರಕರಣ ದಾಖಲಾಗಿದೆ.
ಮಧ್ಯರಾತ್ರಿ ತನ್ನ ಕಾರನ್ನು ವಿಕಾಸ್ ಬರಾಲಾ ಹಾಗು ಆತನ ಸ್ನೇಹಿತ ಹಿಂಬಾಲಿಸಿದ ಬಗ್ಗೆ ವರ್ಣಿಕಾ ಆರೋಪಿಸಿದ್ದ ನಂತರ ಈ ಬಗ್ಗೆ ದೇಶಾದ್ಯಂತ ಚರ್ಚೆಯಾಗಿತ್ತು. ಆಕೆಯ ದೂರಿನ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಬಂಧಿಸಲಾಗಿತ್ತು.
Next Story