ಹೊಸದಿಲ್ಲಿ: ಗುಟ್ಕಾ ಉತ್ಪಾದಕರಿಂದ 20 ಕೋ. ರೂ. ವಶ

ಹೊಸದಿಲ್ಲಿ, ಜ. 11: ಗುಟ್ಕಾ ಉತ್ಪಾದಕರಿಗೆ ಸೇರಿದ ಖಾಸಗಿ ಸೇಫ್ ಲಾಕರ್‌ನಿಂದ ಚಿನ್ನದ ಗಟ್ಟಿ, ಆಭರಣ ಸೇರಿದಂತೆ 20 ಕೋಟಿ ರೂ. ಮೌಲ್ಯದ ನಗದು ಹಾಗೂ ಸೊತ್ತನ್ನು ಆದಾಯ ತೆರಿಗೆ ಇಲಾಖೆಯ ದಿಲ್ಲಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ.
ಬಳಿಕ ಯು ಆ್ಯಂಡ್ ಐ ಸೇಫ್ ಲಾಕರ್‌ನಿಂದ ಮತ್ತೆ 20 ಕೋ. ರೂ.ವನ್ನು ದಿಲ್ಲಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ. ಇದರಲ್ಲಿ 10.5 ಕೋ. ರೂ. ಹಾಗೂ ಚಿನ್ನದ ಗಟ್ಟಿ, ಆಭರಣ ಒಳಗೊಂಡಿದೆ. ಇದು ಗುಟ್ಕಾ ಉತ್ಪಾದಕರು ಹಾಗೂ ನಿರ್ಮಾಣಕಾರರಿಗೆ ಸೇರಿದ್ದು ಎಂದು ಐಟಿ ಮೂಲಗಳು ದೃಢಪಡಿಸಿವೆ.
ಕೆಲವು ಖಾಸಗಿ ಸೇಫ್ ಲಾಕರ್‌ಗಳಿಗೆ ದಿಲ್ಲಿ ನಿರ್ದೇಶನಾಲಯ ಜನವರಿ 5ರಂದು ಸೀಲ್ ಹಾಕಿತ್ತು. ಈ ನಡುವೆ ಗುರ್ಗಾಂವ್ ಮೂಲದ ಜೈ ಭಾರತ್ ಮಾರುತಿ ಗುಂಪಿನಿಂದ 26 ಕೋ. ರೂ. ನಗದು ಹಾಗೂ ಚಿನ್ನ-ಬೆಳ್ಳಿಯ ಗಟ್ಟಿಗಳನ್ನು ದಿಲ್ಲಿ ನಿರ್ದೇಶನಾಲಯ ವಶಪಡಿಸಿಕೊಂಡಿತ್ತು.
Next Story